ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್, ಹಾಗಾಗೇ ಸಿಎಂ ಆಗಿದ್ದು: ಶಾಸಕ ಬಿಅರ್ ಪಾಟೀಲ್!

ಜುಲೈ 2, 2025 - 12:13
 0  9
ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್, ಹಾಗಾಗೇ ಸಿಎಂ ಆಗಿದ್ದು: ಶಾಸಕ ಬಿಅರ್ ಪಾಟೀಲ್!

ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್, ಹಾಗಾಗೇ ಸಿಎಂ ಆಗಿದ್ದು ಎಂದು ಆಳಂದ್ ಶಾಸಕ ಬಿಅರ್ ಪಾಟೀಲ್ ಉಲ್ಟಾ ಹೇಳಿದ್ದಾರೆ. ಸಿದ್ದರಾಮಯ್ಯ ಲಾಟರಿ ಸಿಎಂ ಹೇಳಿಕೆಯ ವಿಡಿಯೋ ವೈರಲ್ಆದ ಬೆನ್ನಲ್ಲೇನನ್ನ ಹೇಳಿಕೆಯನ್ನು ತಿರುಚಲಾಗಿದ್ದು,

 ಸಿದ್ದರಾಮಯ್ಯನವರನ್ನು ನಾವು ಸಿಎಂ ಮಾಡಿಲ್ಲ. ಸಿದ್ದರಾಮಯ್ಯಗೆ ಸಾಥ್ ಕೊಟ್ಟು ನಾನು ಜೆಡಿಎಸ್ ತೊರೆದೆ ಎಂದು ಹೇಳಿದರು. ತನ್ನನ್ನು ತೇಜೋವಧೆ ಮಾಡುವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿರುವ ಸಂಬಂಧವನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದ ಪಾಟೀಲ್,

ತಾನು ಸಿಎಂ ಅವರ ಬಗ್ಗೆ ಮಾತಾಡಿದ್ದು ನಿಜ, ಲಕ್ಕಿ ಲಾಟರಿಯಲ್ಲಿ ಅವರು ಮುಖ್ಯಮಂತ್ರಿ ಆದರೆಂದು ಹೇಳಿದ್ದು ಸಹ ಸತ್ಯ, ಅದರೆ ಅವರು ತನ್ನನ್ನು ಕರೆದೊಯ್ದು ಸೋನಿಯಾ ಗಾಂಧಿವರನ್ನು ಭೇಟಿ ಮಾಡಿಸಿದ್ದು ಅಂತ ವರದಿಯಾಗಿರುವುದು ಶುದ್ಧ ಸುಳ್ಳು ಎಂದರು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow