India vs England: ಭಾರತದಿಂದ ಸಾವಿರದರ್ಶನ: 93 ವರ್ಷಗಳ ನಂತರ ಟೆಸ್ಟ್’ದಲ್ಲಿ ಹೊಸ ದಾಖಲೆ!

ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟಿದ್ದು 93 ವರ್ಷಗಳ ಹಿಂದೆ. ಈ ದೀರ್ಘ ಪ್ರಯಾಣದಲ್ಲಿ ಅನೇಕ ದಿಗ್ಗಜರು ಭಾರತಕ್ಕೆ ಪ್ರತಿಷ್ಠೆ ತಂದಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸಾಧ್ಯವಾಗದ ದಾಖಲೆ ಒಂದನ್ನು ಈಗ ‘ಯಂಗ್ ಇಂಡಿಯಾ’ ಸಾಧಿಸಿದೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 587 ರನ್ (1st innings) ಹಾಗೂ 427 ರನ್ (2nd innings) ಬಾರಿಸಿ ಒಟ್ಟು 1014 ರನ್ಗಳ ದಾಖಲೆ ಬರೆದಿದೆ.
ಇದು ಭಾರತ ಟೆಸ್ಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 1000+ ರನ್ ಬಾರಿಸಿದ ಮೊದಲ ಬಾರಿ. ಈ ಹಿಂದಿನ ಶ್ರೇಷ್ಠ ಸಾಧನೆ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ 916 ರನ್ (705 + 211) ಆಗಿತ್ತು. ಈ ದಾಖಲೆಯೊಂದಿಗೆ ಭಾರತ ಟೆಸ್ಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 1000+ ರನ್ ಮಾಡಿದ 6ನೇ ತಂಡ ಎಂಬ ಗೌರವ ಪಡೆದುಕೊಂಡಿದೆ. ಕ್ರಿಕೆಟ್ ಜನಕನ ನಾಡಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.
ನಿಮ್ಮ ಪ್ರತಿಕ್ರಿಯೆ ಏನು?






