ಇದಲ್ವಾ ಸಾಹಸ: 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಹಿಡಿದ ಮಹಿಳಾ ಅರಣ್ಯಾಧಿಕಾರಿ!

ತಿರುವನಂತಪುರಂ:- 16 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಸೆರೆ ಹಿಡಿದಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ತಿರುವನಂತಪುರದ ಮೂಡಿಲ್ ಪ್ರದೇಶದಲ್ಲಿ ಜು.6ರಂದು ಪರುತಿಪಲ್ಲಿ ಅರಣ್ಯ ಶ್ರೇಣಿಯ ಬೀಟ್ ಅರಣ್ಯ ಅಧಿಕಾರಿ ರೋಶ್ನಿ ಸೆರೆಹಿಡಿದಿದ್ದಾರೆ.
ಮೊದಲಿಗೆ ಕಟ್ಟಿಗೆಗೆ ಒಂದು ಚೀಲ ಕಟ್ಟಿ ಅದರೊಳಗೆ ಹಾವು ಒಳನುಸುಳುವಂತೆ ಮಾಡುತ್ತಾರೆ. ಬಳಿಕ ಹಾವಿನ ಬಾಲ ಹಿಡಿದು ಅದನ್ನು ನಿಧಾನವಾಗಿ ಚೀಲಕ್ಕೆ ತುಂಬುತ್ತಾರೆ. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ
ನಿಮ್ಮ ಪ್ರತಿಕ್ರಿಯೆ ಏನು?






