Shocking Reaction From Rohit Sharma; ಸರಣಿ ಸೋತಿದ್ದೇವೆ ನಿಜ, ಪ್ರಪಂಚ ಇಲ್ಲಿಗೇ ಮುಗೀತಾ.?

ದ್ವೀಪರಾಷ್ಟ್ರ ಶ್ರೀಲಂಕಾ ಎದುರು ಟೀಮ್ ಇಂಡಿಯಾ ಬರೋಬ್ಬರು 27 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೋಲುಂಡಿದೆ. ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ಒಡಿಐ ಕ್ರಿಕೆಟ್ ತಂಡ 110 ರನ್‌ಗಳ ಹೀನಾಯ ಸೋಲಿನೊಂದಿಗೆ 0-2 ಅಂತರದಲ್ಲಿ ಸರಣಿ ಸೋಲುಂಡಿತು. ಸರಣಿಯ ಮೊದಲ ಪಂದ್ಯ 'ಟೈ' ಫಲಿತಾಂಶ ಕಂಡರೆ, ಎರಡನೇ ಪಂದ್ಯದಲ್ಲಿ ಚರಿತ್ ಅಸಲಕಾ ಸಾರಥ್ಯದ ಶ್ರೀಲಂಕಾ 32 ರನ್‌ಗಳ ಜಯ ದಾಖಲಿಸಿತ್ತು.
https://www.instagram.com/p/C97hlGcy8RG/
ಟೀಮ್ ಇಂಡಿಯಾದ ಈ ಹೀನಾಯ ಪ್ರದರ್ಶನದ ಕುರಿತಾಗಿ ಪೋಸ್ಟ್ ಮ್ಯಾಚ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, "ಕೇವಲ ಸರಣಿ ಸೋತಿದ್ದೇವೆ, ಇಲ್ಲಿಗೆ ಪ್ರಪಂಚ ಮುಗಿಯುವುದಿಲ್ಲ," ಎಂಬ ಉತ್ತರ ಕೊಟ್ಟಿದ್ದಾರೆ. ಅಂದಹಾಗೆ ಸರಣಿಯಲ್ಲಿ ಶ್ರೀಲಂಕಾ ತಂಡದ ಸ್ಪಿನ್ನರ್‌ಗಳ ಎದುರು ಭಾರತೀಯ ಬ್ಯಾಟರ್‌ಗಳು ಸಂಪೂರ್ಣ ವಿಫಲರಾಗಿದ್ದೇ ಸೋಲಿಗೆ ದೊಡ್ಡ ಕಾರಣವಾಯಿತು. ಪರಿಣಾಮ 1997ರ ಬಳಿಕ ಇದೇ ಮೊದಲ ಬಾರಿ ಶ್ರೀಲಂಕಾ ಎದುರು ದ್ವಿಪಕ್ಷೀಯ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ ಸೋತಂತ್ತಾಗಿದೆ.
ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 249 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ತಂಡ 138 ರನ್‌ಗಳಿಗೆ ಆಲ್‌ಔಟ್ ಆಯಿತು. ಬ್ಯಾಟಿಂಗ್ ವೈಫಲ್ಯ ಕಂಡು 26.1 ಓವರ್‌ಗಳಲ್ಲಿ 138 ರನ್‌ಗಳ ಅಲ್ಪ ಮೊತ್ತಕ್ಕೆ ಟೀಮ್ ಇಂಡಿಯಾ ಸರ್ವಪತನ ಕಂಡು ಆಘಾತಕ್ಕೊಳಗಾಯಿತು. ಶ್ರೀಲಂಕಾ ತಂಡದ ಯುವ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಸರಣಿಯಲ್ಲಿ ಎರಡನೇ ಭಾರಿ 5 ವಿಕೆಟ್ ಪಡೆದ ಸಾಧನೆ ಮೆರೆದರು.
ಶ್ರೀಲಂಕಾ ತಂಡ ಈ ಸರಣಿಯಲ್ಲಿ ನಮಗಿಂತಲೂ ಉತ್ತಮ ಕ್ರಿಕೆಟ್ ಆಡಿದೆ. ಇದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಈ ರೀತಿಯ ಪಿಚ್‌ಗಳು ಎದುರಾದಾಗ ಯಾವ ರೀತಿ ಸವಾಲು ಮೆಟ್ಟಿನಿಲ್ಲಬೇಕು ಎಂಬುದರ ಕಡೆಗೆ ನಾವೀಗ ಆಲೋಚನೆ ಮಾಡಬೇಕು. ಸರಣಿ ಸೋತಿದ್ದೇವೆ ಎಂದ ಮಾತ್ರಕ್ಕೆ ಇಲ್ಲಿಗೆ ಪ್ರಚಂಚ ಕೊನೆಗೊಂಡಿದೆ ಎಂದರ್ಥವಲ್ಲ. ಹಲವು ವರ್ಷಗಳಿಂದ ಈ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಮೋಘ ಪ್ರದರ್ಶನಗಳನ್ನು ನೀಡಿದ್ದಾರೆ. ಈ ನಡುವೆ ಕೆಲ ಸರಣಿಗಳನ್ನು ಸೋಲುವುದು ಸಾಮಾನ್ಯ ಸಂಗತಿ," ಎಂದು ನಾಯಕ ರೋಹಿತ್ ಶರ್ಮಾ ತಂಡದ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ..!
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ.
ನಿಮ್ಮ ಪ್ರತಿಕ್ರಿಯೆ ಏನು?






