ಗೋಲ್ಡ್ ಸಾಗಣೆ ಕೇಸ್: ಚಿನ್ನದ ಬ್ಯೂಟಿ ನಟಿ ರನ್ಯಾ ರಾವ್ʼಗೆ ಶಾಕ್ ಕೊಟ್ಟ ED ಅಧಿಕಾರಿಗಳು.!

ಬೆಂಗಳೂರು: ಚಿನ್ನದ ಬ್ಯೂಟಿ ನಟಿ ರನ್ಯಾ ರಾವ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ತನಿಖೆಯಲ್ಲಿ ಒಂದೊಂದೇ ಸ್ಫೋಟಕ ಮಾಹಿತಿಗಳು ಆಚೆ ಬರುತ್ತಿದೆ. ಪ್ರಭಾವಿಗಳಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ನಡುಕ ಶುರುವಾಗಿದೆ. ಒಂದೆಡೆ ಕೆಲ ರಾಜಕಾರಣಿಗಳು, ಇಬ್ಬರು ಸಚಿವರ ಜೊತೆ ರನ್ಯಾಗೆ ಲಿಂಕ್ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಉದ್ಯಮಿಗಳ ಜೊತೆಯೂ ಲಿಂಕ್ ಹೊಂದಿರುವ ರನ್ಯಾ, ಅಂತರಾಷ್ಟ್ರೀಯ ಗೋಲ್ಡ್ ಸ್ಮಗ್ಲರ್‌ಗಳ ಜೊತೆಯೂ ಸಂಪರ್ಕ ಹೊಂದಿದ್ದರಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ
. ಈ ನಡುವೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಟಿ ರನ್ಯಾ ರಾವ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೂ ಮುನ್ನ ನಟಿ ರನ್ಯಾ, ಆಕೆಯ ಪತಿ ಜತಿನ್ ಹಾಗೂ ಗೆಳೆಯ ತರುಣ್ ಮನೆಗಳು ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ದಾಳಿ ನಡೆಸಿತ್ತು.
ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಆಡುಗೋಡಿ ಬಳಿ ರನ್ಯಾ ರಾವ್ ಅವರ ಪತಿ ನಿವಾಸದ ಮೇಲೆ ಡಿಆರ್‌ಐ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






