Mohammed Siraj: DSP ಸಿರಾಜ್ ಸಂಬಳ ಎಷ್ಟು ಗೊತ್ತಾ? ಅವರ ಒಟ್ಟು ಆಸ್ತಿ ಎಷ್ಟು ಕೋಟಿ.?

ಆಗಸ್ಟ್ 9, 2025 - 09:19
 0  11
Mohammed Siraj: DSP ಸಿರಾಜ್ ಸಂಬಳ ಎಷ್ಟು ಗೊತ್ತಾ? ಅವರ ಒಟ್ಟು ಆಸ್ತಿ ಎಷ್ಟು ಕೋಟಿ.?

ತನ್ನ ದಿಟ್ಟ ಬೌಲಿಂಗ್ ಶೈಲಿಯಿಂದ ವಿಶ್ವದಾದ್ಯಂತ ಗಮನ ಸೆಳೆದಿರುವ ಮೊಹಮ್ಮದ್ ಸಿರಾಜ್, ಇದೀಗ ಕೇವಲ ಕ್ರಿಕೆಟಿಗನಾಗಿ ಅಲ್ಲದೆ, ತೆಲಂಗಾಣ ಪೊಲೀಸ್ ಇಲಾಖೆಯ ಡಿಎಸ್ಪಿಯಾಗಿ ಸಹ ಯಶಸ್ಸು ಸಾಧಿಸಿದ್ದಾರೆ.

ಇತ್ತೀಚೆಗಿನ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಸಿರಾಜ್ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಮಹತ್ವದ ಗೆಲುವು ತಂದುಕೊಟ್ಟರು. ಅವರ ಬೌಲಿಂಗ್ನಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು, ಭಾರತ ಸರಣಿಯನ್ನು ಡ್ರಾ ಮಾಡಿಕೊಂಡಿತು. ಪ್ರದರ್ಶನದಿಂದಾಗಿ ಸಿರಾಜ್ ಹೆಸರು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಸಿರಾಜ್, ಬಿಸಿಸಿಐಯಿಂದ ವಾರ್ಷಿಕವಾಗಿ ₹5 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಇದರ ಜೊತೆಗೆ, ಐಪಿಎಲ್ತಂಡವಾದ ಗುಜರಾತ್ ಟೈಟಾನ್ಸ್ ಅವರು 2024-25 ಸೀಸನ್ನಲ್ಲಿ ₹12.25 ಕೋಟಿ ಸಂಭಾವನೆ ನೀಡುತ್ತಿದೆ. ಇದಕ್ಕೂ ಮೊದಲು ಅವರು ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳನ್ನು ಪ್ರತಿನಿಧಿಸಿದ್ದರು.

ಕೆಲವು ವರದಿಗಳ ಪ್ರಕಾರ, ಸಿರಾಜ್ ಅವರ ಒಟ್ಟು ನಿವ್ವಳ ಆಸ್ತಿ ₹57 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ದುಬಾರಿ ಮನೆಗಳು, ಕಾರುಗಳು ಮತ್ತು ಬ್ರಾಂಡ್ ಎಂಡೋರ್ಸ್ಮೆಂಟ್ಗಳಿಂದಲೂ ಆದಾಯ ಬಂದಿದೆ.

ಕ್ರಿಕೆಟ್ ಕ್ಷೇತ್ರದ ತಾರೆ, ತೆಲಂಗಾಣ ಸರ್ಕಾರದಿಂದ ಡೆಪ್ಯುಟಿ ಎಸ್ಪಿ (DSP) ಹುದ್ದೆಗೆ ನೇಮಕಗೊಂಡಿದ್ದಾರೆ. ಪ್ರಸ್ತುತ ಅವರು ತಿಂಗಳಿಗೆ ₹58,850 ರಿಂದ ₹1,37,050 ರೂ.ಗಳವರೆಗೆ ಸಂಬಳ ಪಡೆಯುತ್ತಿದ್ದಾರೆ. ಇದರಲ್ಲಿ ಮನೆ ಬಾಡಿಗೆ ಭತ್ಯೆ, ಆರೋಗ್ಯ ಮತ್ತು ಪ್ರಯಾಣ ಭತ್ಯೆಗಳೂ ಸೇರಿವೆ. ಮುಂದೆ 8ನೇ ವೇತನ ಆಯೋಗ ಜಾರಿಯಾದರೆ, ಅವರ ಸಂಬಳ ₹80,000 ರಿಂದ ₹1.85 ಲಕ್ಷದವರೆಗೆ ಹೆಚ್ಚಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow