ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿದ್ದಾನೆ, ಹೀಗಾಗಿ ಬೊಗಳುತ್ತಿದ್ದಾನೆ: ಈ ರೀತಿ ಹೇಳಿದ್ಯಾರು ಗೊತ್ತಾ..?
ಭಾರತ-ಪಾಕಿಸ್ತಾನ ಕ್ರಿಕೆಟಿಗರ ನಡುವಿನ ಜಿದ್ದಾಟ ಮೈದಾನದಲ್ಲಿ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಮುಂದುವರಿಯುತ್ತದೆ. ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ತಮ್ಮ ಪಾಕಿಸ್ತಾನ ಪ್ರವಾಸದ ಕಾಲದ ಹಳೆಯ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.
2006ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸದಲ್ಲಿದ್ದಾಗ, ಕರಾಚಿಯಿಂದ ಲಾಹೋರ್‌ಗೆ ಹೋಗುವ ವಿಮಾನದಲ್ಲಿ ಇಬ್ಬರೂ ತಂಡಗಳ ಆಟಗಾರರು ಒಂದೇ ಬಾರಿಯ ಪ್ರಯಾಣ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ, ಯುವ ಆಟಗಾರನಾಗಿದ್ದ ಇರ್ಫಾನ್ ಪಠಾಣ್ ಅವರನ್ನು ಕೆಣಕಲು ಯತ್ನಿಸಿದರು.
ಅಫ್ರಿದಿ, ಪಠಾಣ್ ಅವರ ಕೂದಲನ್ನು ಹಾಳು ಮಾಡಿ, “ಹೇಗಿದ್ದೀಯ ಮಗು?” ಎಂದು ಕೇಳಿದರೆ, ಕೋಪಗೊಂಡ ಪಠಾಣ್, “ನೀನು ಯಾವಾಗಿನಿಂದ ನನ್ನ ತಂದೆಯಾದೆ?” ಎಂದು ತಿರುಗೇಟು ನೀಡಿದ್ದರು. ಇದರಿಂದ ಅಫ್ರಿದಿ ಕೆಲ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದರೆಂದು ಪಠಾಣ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ವಿಮಾನದಲ್ಲಿದ್ದಾಗ ಇರ್ಫಾನ್ ಪಠಾಣ್ ಪಾಕಿಸ್ತಾನದ ಕ್ರಿಕೆಟಿಗ ಅಬ್ದುಲ್ ರಝಾಕ್ ಅವರೊಂದಿಗೆ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ, “ಇಲ್ಲಿ ನಾಯಿ ಮಾಂಸ ಸಿಗುತ್ತದೆಯೇ?” ಎಂದು ಪ್ರಶ್ನಿಸಿದ್ದರು, ಇಲ್ಲಾ, ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿರಬೇಕು. ಅದಕ್ಕಾಗಿಯೇ ಅವರು ಬೊಗಳುತ್ತಲೇ ಇರುತ್ತಾರೆ ಎಂದು ನಾನು ಮರು ಉತ್ತರ ನೀಡಿದ್ದೆ. ಇದರಿಂದ ಅಫ್ರಿದಿ ಮತ್ತಷ್ಟು ಕೋಪಗೊಂಡರು. ಇದಾಗ್ಯೂ ನಾನು ನೀಡಿದ ಕೌಂಟರ್ ಅಟ್ಯಾಕ್ಗೆ ಶಾಹಿದ್ ಅಫ್ರಿದಿ ತುಟಿಕ್ ಪಿಟಿಕ್ ಅನ್ನಲಿಲ್ಲ ಎಂದು ಇರ್ಫಾನ್ ಪಠಾಣ್ 19 ವರ್ಷಗಳ ಹಳೆಯ ಘಟನೆಯನ್ನು ಮೆಲುಕು ಹಾಕಿದರು.
ನಿಮ್ಮ ಪ್ರತಿಕ್ರಿಯೆ ಏನು?