Bigg Boss Kannada: ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಔಟ್..!

ಜನವರಿ 26, 2025 - 20:33
 0  17
Bigg Boss Kannada: ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಔಟ್..!

ಬಿಗ್ಬಾಸ್ಸೀಸನ್ 11 ಗ್ರ್ಯಾಂಡ್ಫಿನಾಲೆ ನಡೆಯುತ್ತಿದೆ. ಇಂದು ಸಂಜೆ 6 ಗಂಟೆಗೆ ಶುರುವಾದ ಬಿಗ್ಬಾಸ್ಶೋನಲ್ಲಿ ಇದೀಗ ಬಿಗ್​​ ಬಾಸ್​​ ಮನೆಯಿಂದ ಉಗ್ರಂ ಮಂಜು ಔಟ್ ಆಗಿದ್ದಾರೆ. ಹೌದು, ಉಗ್ರಂ ಮಂಜು ಬಾರಿ ಬಿಗ್ಬಾಸ್ವಿನ್ನರ್ ಆಗ್ತಾರೆ ಅಂತಾ ಅನೇಕರು ಅಂದುಕೊಂಡಿದ್ದರು.

ಬಿಗ್ಬಾಸ್ಸೀಸನ್ 11 ಗ್ರ್ಯಾಂಡ್ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ಫಿನಾಲೆಗೆ ಬಂದ 6 ಜನರ ಪೈಕಿ ಭವ್ಯ ಗೌಡ ನಿನ್ನೆಯ ಸಂಚಿಕೆಯಲ್ಲಿ ಎಲಿಮಿನೇಟ್ಆಗಿದ್ದರು. ಹೀಗಾಗಿ ಬಿಗ್ಬಾಸ್ಮನೆಯಲ್ಲಿ ಐದು ಸ್ಪರ್ಧಿಗಳು ಉಳಿದುಕೊಂಡಿದ್ದರು. ಅದರಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ ಹಾಗೂ ರಜತ್ಟಾಪ್‌ 5 ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದರು.

ಇದೀಗ ಅಚ್ಚರಿ ಎಂಬಂತೆ 119ನೇ ದಿನಗಳ ಕಾಲ ಬಿಗ್ಬಾಸ್ಮನೆಯಲ್ಲಿ ಉಳಿದುಕೊಂಡಿದ್ದ ಮ್ಯಾಕ್ಸ್ ಮಂಜು ಕೊನೆಯ ಕ್ಷಣದಲ್ಲಿ ಆಚೆ ಬಂದಿದ್ದಾರೆ. ಹೀಗಾಗಿ ನಾಲ್ಕನೇ ರನ್ನರ್ಅಪ್ಆಗಿ ಉಗ್ರಂ ಮಂಜು ಬಿಗ್ಬಾಸ್ಮನೆಯಿಂದ ಹೊರಬಂದಿದ್ದಾರೆ.

 ಇನ್ನೂ, ಉಗ್ರಂ ಮಂಜು ಒಬ್ಬ ಬಲಿಷ್ಠ ಬಿಗ್ಬಾಸ್ಸ್ಪರ್ಧಿಗೆ ಇರಬೇಕಾದಂತಹ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಉಗ್ರಂ ಬಿಗ್ಬಾಸ್ಶುರುವಾರದ ಆರಂಭದಲ್ಲಿಯೇ ಪಕ್ಕಾ ಫಿನಾಲೆ ಸ್ಪರ್ಧಿ ಎಂದು ವೀಕ್ಷಕರು ಗುರುತಿಸಿಕೊಂಡಿದ್ದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow