ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ?

ಆಗಸ್ಟ್ 17, 2025 - 09:05
ಆಗಸ್ಟ್ 16, 2025 - 16:11
 0  18
ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ?

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ವಿವಿಧೆಡೆ ಇಂದು  ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಎಸ್‌.ಆರ್‌.ಎಸ್‌. ಪೀಣ್ಯ ವಿದ್ಯುತ್‌ ಉಪಕೇಂದ್ರ ವ್ಯಾಪ್ತಿಯ ಗೃಹಲಕ್ಷ್ಮಿ ಅಪಾರ್ಟ್‌ಮೆಂಟ್‌, ಎಸ್‌ಎಂ ರಸ್ತೆ, ಜಾಲಹಳ್ಳಿ ಕ್ರಾಸ್‌, ಚೊಕ್ಕಸಂದ್ರ, ಮಾರುತಿ ಲೇಔಟ್‌, ಕೆಂಪಯ್ಯ ಲೇಔಟ್‌, ಜಿ.ಜಿ. ಪಾಳ್ಯ, ಇಸ್ರೋ, ನಾರಾಯಣಪುರ, ಗಣಪತಿನಗರ ಮುಖ್ಯ ರಸ್ತೆ, ಚಾಮುಂಡಿಪುರ,

ರಾಜೇಶ್ವರಿನಗರ, ಆಕಾಶ ಥಿಯೇಟರ್‌ ರಸ್ತೆ, ಭೈರವೇಶ್ವರ ನಗರ, ಬ್ಯಾಂಕ್‌ ಕಾಲೊನಿ, ಮುನೇಶ್ವರ ಲೌಔಟ್‌, ಎಫ್‌ಎಫ್‌ ಲೇಔಟ್‌, ಎನ್‌ಎಸ್‌ ಬಡಾವಣೆ, ಕೆಜಿ ಲೇಔಟ್‌, ರಾಜೀವ್‌ಗಾಂಧಿ ನಗರ, ಚೌಡೇಶ್ವರಿ ನಗರ, ಪೀಣ್ಯ 4ನೇ ಹಂತ, ರಿಲಾಯಸ್ಸ್‌ ಇಂಡಸ್ಟ್ರೀಸ್‌, ಸಿಕೆಎ, ಅಲಿಸ್ಡಾ, ರಾಘವೇಂದ್ರ ಲೇಔಟ್‌, ಆರ್‌ಎನ್‌ಎಸ್‌ ಮೋಟರ್ಸ್, ಮುನೇಶ್ವರ ನಗರ, ವೈಷ್ಣವಿ ಅಪಾರ್ಟ್‌ಮೆಂಟ್‌, ಪ್ಲಾಟಿನಂ ಸಿಟಿ ಅಪಾರ್ಟ್‌ಮೆಂಟ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow