ಜೈಲು ಪಾಲಾದ ಬಿಗ್ ಬಾಸ್ ಸ್ಪರ್ಧಿ ಹನುಮಂತು: ಪ್ರಾಣ ಸ್ನೇಹಿತರೇ ವೈರಿಗಳಾದ್ರಾ? ಧನರಾಜ್ ಆರೋಪವೇನು?

ಹನುಮಂತು ಹಾಗೂ ಧನ್ರಾಜ್ ಬಿಗ್ಬಾಸ್ನಲ್ಲಿ ಬೆಸ್ಟ್ ಫ್ರೆಂಡ್ ಎಂದು ಹೇಳಲಾಗುತ್ತಿದೆ. ಆಟದ ವಿಚಾರಕ್ಕೆ ಬಂದರೆ ಇದು ಎಲ್ಲವನ್ನು ಪಕ್ಕಕ್ಕೆ ಇಡಬೇಕಾಗುತ್ತದೆ. ಇದು ಬಿಗ್ ಮನೆಯಲ್ಲಿ ಹನುಮಂತು- ಧನ್ರಾಜ್ ನಡುವೆ ನಿಜವಾಗಿದೆ. ಇಷ್ಟು ದಿನ ಕುಚುಕು ಸ್ನೇಹಿತರಾಗಿದ್ದ ಈ ಇಬ್ಬರು ಸದ್ಯ ಬೇಸರಲ್ಲಿದ್ದಾರೆ ಎಂದು ಹೇಳಬಹುದು.
ಇವರಿಬ್ಬರ ಜೋಡಿ ನೋಡಿದ್ದ ಕನ್ನಡಿಗರು ಗೆಳೆಯರೆಂದರೆ ಹೀಗೆ ಇರಬೇಕು ಎಂದು ಹೇಳುತ್ತಿದ್ದರು. ಆದರೆ ಮನೆಯಲ್ಲಿ ಈ ವಾರ ಹನುಮಂತು ಚೆನ್ನಾಗಿ ಆಡಲಿಲ್ಲ ಎಂದು ಧನ್ರಾಜ್ ಹೇಳಿ ಪ್ರಾಣ ಸ್ನೇಹಿತನಿಗೆ ಕಳಪೆ ಪಟ್ಟ ಕಟ್ಟಿದ್ದಾರೆ. ಇದು ಇಬ್ಬರ ನಡುವಿನ ಶತ್ರುತ್ವಕ್ಕೆ ಮೊದಲ ಹೆಜ್ಜೆ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಪ್ರಾಣ ಸ್ನೇಹಿತರು ಬದ್ಧ ವೈರಿಗಳಾದ್ರೆ ಬಿಗ್ಬಾಸ್ ಮನೆಯ ವಾತಾವರಣ ಬದಲಾಣೆ ಆಗಬಹುದು ಎಂದು ವೀಕ್ಷಕರ ಸಂಶಯ ಮೂಡಿದೆ.
ಈ ವಾರ ಬಿಗ್ ಬಾಸ್ ಮನೆ ರೆಸ್ಟಾರೆಂಟ್ ಆಗಿತ್ತು. ಎದುರಾಳಿಗಳನ್ನು ಕುಗ್ಗಿಸಲು, ಸಂಕಷ್ಟಕ್ಕೆ ದೂಡಲು ಎರಡೂ ತಂಡಗಳು ಶಕ್ತಿಮೀರಿ ಪ್ರಯತ್ನಿಸಿತ್ತು. ಆದರೆ ಹನುಮಂತ ಆಡಿದ ಪರಿಗೆ ಸ್ಪರ್ಧಿಗಳಿಗೆ ಅಸಮಧಾನ ವ್ಯಕ್ತವಾಗಿದೆ.
ಗೌತಮಿ, ಮೋಕ್ಷಿತಾ, ಮಂಜು, ಚೈತ್ರಾ ಸೇರಿದಂತೆ ಅನೇಕರು ಹನುಮಂತ ಅವರಿಗೆ ಕಳಪೆ ಕೊಟ್ಟಿದ್ದಾರೆ. ಧನರಾಜ್ ಅವರು ತುಂಬಾ ತಪ್ಪು ಅಂತ ಹನುಮಂತ ಕಾಣಿಸಿದರು ಎಂದರು. ಚೈತ್ರಾ ಅವರು ಹನುಮಂತನ ಬಗ್ಗೆ ಶುಚಿತ್ವದ ಬಗ್ಗೆ ಕಾರಣ ಕೊಟ್ಟರು. ಇನ್ನು ಹುನುಮಂತು ಕೂಡ ಧನ್ಯವಾದಗಳು. ಕಳಪೆ ಕೊಟ್ಟಿದ್ದಕ್ಕೆ ನಾನು ಬಗ್ಗೋದೆ ಇಲ್ಲ, ಕುಗ್ಗೋದೆ ಇಲ್ಲ ಎಂದಿದ್ದಾರೆ.
ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11, 88 ದಿನಗಳು ಕಳೆದಿವೆ. ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ. ಬಿಗ್ಬಾಸ್ ಮನೆಯಲ್ಲಿ ಇರುವ ಹತ್ತು ಜನರಲ್ಲಿ ಈ ವಾರ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಇಬ್ಬರು ಮಾತ್ರವೇ ನಾಮಿನೇಷನ್ನಿಂದ ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಉಗ್ರಂ ಮಂಜು, ಗೌತಮಿ, ಧನರಾಜ್, ಹನುಮಂತು ಅವರುಗಳು ನಾಮಿನೇಟ್ ಆಗಿದ್ದಾರೆ.
ಪ್ರತಿ ವಾರ ನಾಮಿನೇಟ್ ಆಗುವ ಮೋಕ್ಷಿತಾ ಮತ್ತು ಚೈತ್ರಾ ಕುಂದಾಪುರ ಈ ವಾರವೂ ನಾಮಿನೇಟ್ ಆಗಿದ್ದಾರೆ. ಭವ್ಯಾ ಗೌಡ ಕ್ಯಾಪ್ಟನ್ ಆಗಿರುವ ಕಾರಣ ಅವರನ್ನು ನಾಮಿನೇಟ್ ಮಾಡುವಂತಿರಲಿಲ್ಲ. ಇನ್ನು ರಜತ್ ಅವರನ್ನು ಮನೆಯ ಯಾವ ಸದಸ್ಯರೂ ಸಹ ನಾಮಿನೇಟ್ ಮಾಡಲಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






