ಸಾಂಬಾರ್ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ: ಆತ್ಮಹತ್ಯೆಗೆ ಶರಣಾದ ಪತ್ನಿ!

ಮೇ 31, 2025 - 16:27
 0  26
ಸಾಂಬಾರ್ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ: ಆತ್ಮಹತ್ಯೆಗೆ ಶರಣಾದ ಪತ್ನಿ!

ಬೆಂಗಳೂರು: ದೇವನಹಳ್ಳಿ ತಾಲೂಕಿನ ಸಾವನಕನಹಳ್ಳಿಯಲ್ಲಿ ದಂಪತಿ ನಡುವೆ ಸಾಂಬಾರ್ ವಿಚಾರಕ್ಕೆ ಗಲಾಟೆ ನಡೆದು ಪತ್ನಿ ಸಾವಿನಲ್ಲಿ ಕೊನೆಯಾಗಿರುವ ಘಟನೆ ನಡೆದಿದೆ. 38 ವರ್ಷದ ನಾಗರತ್ನ ಮೃತ ಮಹಿಳೆಯಾಗಿದ್ದಾರೆ. ಸಾಂಬಾರ್ ವಿಚಾರಕ್ಕೆ ದಂಪತಿ ನಡುವೆ ಕಲಹ ಶುರುವಾಗಿತ್ತಂತೆ.

 ಕ್ಷುಲ್ಲಕ ವಿಚಾರಕ್ಕೆ ಶುರುವಾದ ಕಲಹದಿಂದ ಮಹಿಳೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆಮನೆಯಲ್ಲಿ ನೇಣಿ ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಗಳದ್ದು ಆತ್ಮಹತ್ಯೆಯಲ್ಲಕೊಲೆ ಅಂತ ಮಹಿಳೆಯ ತವರು ಮನೆಯವರು ಆರೋಪ ಮಾಡಿದ್ದಾರೆ

 ಹಣಕಾಸಿನ ವಿಚಾರಕ್ಕೆ ಗಂಡನೇ ಕೊಲೆ ಮಾಡಿದ್ದಾನೆ ಎಂದು ಮೃತಳ ಅಣ್ಣ ಮತ್ತು ತಾಯಿ ಆರೋಪ ಮಾಡಿದ್ದಾರೆ. ಮಹಿಳೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow