ಸಾಲದಲ್ಲಿ ಮುಳುಗಿ ಹೋಗ್ತೀರಾ! ಅಪ್ಪಿತಪ್ಪಿಯೂ ಬುಧವಾರ ಈ ತಪ್ಪು ಮಾಡ್ಬೇಡಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ದಿನವೂ ಯಾವುದಾದರೊಂದು ದೇವರು ಅಥವಾ ಗ್ರಹಕ್ಕೆ ಸಂಬಂಧಿಸಿದೆ. ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗುತ್ತದಂತೆ. ಮಂಗಳವಾರ ಆಂಜನೇಯನಿಗೆ ಸಂಬಂಧಿಸಿದೆ. ಅಂತೆಯೇ, ಬುಧವಾರವು ಗಣಪತಿ ಮತ್ತು ಬುಧ ಗ್ರಹಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಬುಧವಾರ ತಾಯಿ, ಹೆಂಡತಿ ಅಥವಾ ಸಹೋದರಿಗೆ ಅವಮಾನ ಮಾಡಬೇಡಿ. ಅವರನ್ನು ನಿಂದಿಸುವುದು, ಸುಮ್ಮನೇ ತೆಗಳುವುದು ಮಾಡುವುದರಿಂದ ಸಮಸ್ಯೆಗಳು ಬರುತ್ತದೆ. ಈ ದಿನ ಹಸಿರು ಬಳೆಯನ್ನು ಮನೆಯ ಹೆಂಗಸರಿಗೆ ಕೊಡಿಸಿದರೆ ಒಳ್ಳೆಯದಾಗುತ್ತದೆ
ಸಾಲ ಮಾಡಬೇಡಿ: ಯಾವುದೇ ಕಾರಣಕ್ಕೂ ಬುಧವಾರ ಯಾರಿಂದಲೂ ಹಣವನ್ನು ಸಾಲವಾಗಿ ಪಡೆಯಲು ಹೋಗಬೇಡಿ. ಹಾಗೆಯೇ ಈ ದಿನ ಬೇರೆಯವರಿಗೆ ಸಹ ಹಣವನ್ನು ಸಾಲವಾಗಿ ಕೊಡಬಾರದು. ಈ ತಪ್ಪು ಮಾಡಿದರೆ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದು ಮಾತ್ರವಲ್ಲದೇ ಹಣದ ಸಮಸ್ಯೆ ಉಂಟಾಗಬಹುದು.
ಕಪ್ಪು ಬಟ್ಟೆ ಧರಿಸಬೇಡಿ: ಬುಧವಾರ ಮದುವೆಯಾದ ಮಹಿಳೆಯರು ಕಪ್ಪು ಬಟ್ಟೆಯನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಹಾಗೆಯೇ ಈ ದಿನ ಕಪ್ಪು ಬಣ್ಣದ ಆಭರಣಗಳನ್ನು ಸಹ ಹಾಕಬಾರದು. ಕಪ್ಪು ಬಟ್ಟೆ ಧರಿಸುವುದು ಗಂಡನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಪೂರ್ವ ದಿಕ್ಕಿಗೆ ಪ್ರಯಾಣ ಮಾಡಬೇಡಿ: ಶಾಸ್ತ್ರಗಳ ಪ್ರಕಾರ ಬುಧವಾರ ಪೂರ್ವ ದಿಕ್ಕಿನ ಕಡೆ ಪ್ರಯಾಣ ಮಾಡುವುದು ಅಶುಭ ಎನ್ನಲಾಗುತ್ತದೆ, ಇದರಿಂದ ಅಪಘಾತ ಸೇರಿದಂತೆ ವಿವಿಧ ಸಮಸ್ಯೆಗಳು ಬರಬಹುದು ಎನ್ನಲಾಗುತ್ತದೆ
ಹೂಡಿಕೆ ಮಾಡಬಾರದು: ಬುಧವಾರ ಹಣವನ್ನು ಸಾಲ ಕೊಡುವುದು ಅಥವಾ ಸಾಲ ಪಡೆಯುವುದು ಹೇಗೆ ಒಳ್ಳೆಯದಲ್ಲವೋ ಹಾಗೆಯೇ ಹೂಡಿಕೆ ಮಾಡುವುದು ಸಹ ಅಪಾಯಕ್ಕೆ ಆಹ್ವಾನಕೊಟ್ಟಂತೆ ಎನ್ನಲಾಗುತ್ತದೆ. ಅಪ್ಪಿ-ತಪ್ಪಿ ಬುಧವಾರ ಹೂಡಿಕೆ ಮಾಡಿದರೆ ನಷ್ಟವಾಗುತ್ತದೆ.
ಕೆಟ್ಟ ಭಾಷೆ ಬಳಕೆ ಮಾಡಬೇಡಿ: ಬುಧವಾರ ಕೆಟ್ಟ ಭಾಷೆ ಬಳಸುವುದರಿಂದ ಜೀವನದ ನೆಮ್ಮದಿ ಹಾಳಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಇದರಿಂದ ಸಾಲು ಸಾಲು ತೊಂದರೆಗಳು ಬರುತ್ತದೆ ಎನ್ನುವ ನಂಬಿಕೆ ಇದೆ. ಬುಧವಾರ ಶಾಂತಿಯಿಂದ ಇರುವುದು ಅಗತ್ಯ.
ಗಣೇಶನ ಆರಾಧನೆ ಮಾಡಿ: ಬುಧವಾರ ಗಣೇಶನ ಆರಾಧನೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನ ಗಣಪತಿ ದೇವಸ್ಥಾನಕ್ಕೆ ಹೋಗಿ ಮೋದಕ ಹಾಗೂ ಗರಿಕೆ ಅರ್ಪಣೆ ಮಾಡಿ.
ನಿಮ್ಮ ಪ್ರತಿಕ್ರಿಯೆ ಏನು?






