ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಹುಲ್ ಅದ್ಭುತ ಪ್ರದರ್ಶನ: ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ ಹೊಸ ಜವಬ್ದಾರಿ! ಏನದು?

ಮಾರ್ಚ್ 12, 2025 - 08:49
 0  14
ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಹುಲ್ ಅದ್ಭುತ ಪ್ರದರ್ಶನ: ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ  ಹೊಸ ಜವಬ್ದಾರಿ! ಏನದು?

ಮೊನ್ನೆ ಮೊನ್ನೆ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ಕನ್ನಡಿಗ KL ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಅತ್ಯದ್ಭುತವಾಗಿತ್ತು. ಅಲ್ಲದೇ ಕಷ್ಟದ ಸಮಯದಲ್ಲಿ ತಂಡ ಇದ್ದಾಗ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಭಾರತದ ಗೆಲುವಿನ ನಗೆ ಬೀರಲು ಇವರು ಒಬ್ಬರಾದರು. 

ಚಾಂಪಿಯನ್ಸ್‌ ಟ್ರೋಫಿಗಾಗಿ ಅನೌನ್ಸ್​ ಆದ ಭಾರತ ತಂಡದಲ್ಲಿ ಮೊದಲ ವಿಕೆಟ್​ ಕೀಪರ್​ ಬ್ಯಾಟರ್​ ಆಗಿ ಕೆ.ಎಲ್​ ರಾಹುಲ್​ ಆಯ್ಕೆಯಾಗಿದ್ದರು. ಪಂತ್​ ಕೂಡ ಸೆಲೆಕ್ಟ್​ ಆಗಿದ್ದ ಕಾರಣ ಕೆ.ಎಲ್​ ರಾಹುಲ್​​​ ಅವರಿಗೆ ಚಾನ್ಸ್​ ಸಿಗುತ್ತಾ? ಅನ್ನೋ ಪ್ರಶ್ನೆ ಕೇಳಿ ಬಂದಿತ್ತು. ಈ ಸವಾಲುಗಳನ್ನು ಮೆಟ್ಟಿನಿಂತು ಸಿಕ್ಕ ಅವಕಾಶವನ್ನು ರಾಹುಲ್​ ಸಮರ್ಥವಾಗಿ ಉಪಯೋಗಿಸಿಕೊಂಡರು. ಇವರು ಬ್ಯಾಟಿಂಗ್​​ ಮತ್ತು ಕೀಪಿಂಗ್​ನಲ್ಲೂ ಅಮೋಘ ಪ್ರದರ್ಶನ ನೀಡಿ ಭಾರತ ಗೆಲುವಿನಲ್ಲಿ ಕೀ ರೋಲ್​ ಪ್ಲೇ ಮಾಡಿದರು.

ಮಧ್ಯಮ ಕ್ರಮಾಂಕದಲ್ಲೂ ಕೆ.ಎಲ್​ ರಾಹುಲ್​ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ತಮ್ಮ ಬ್ಯಾಟ್​ನಿಂದಲೇ ಉತ್ತರ ಕೊಟ್ಟಿದ್ದಾರೆ. ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರ ಮನ ಗೆದ್ದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್‌ ಟೀಮ್ ಇಂಡಿಯಾದ ಹೊಸ ಫಿನಿಷರ್‌ ಆಗಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.

ಕೆಎಲ್ ರಾಹುಲ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ 5 ಪಂದ್ಯಗಳ 4 ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸಿದ್ದರು. ಕೇವಲ ಒಮ್ಮೆ ಮಾತ್ರ ಔಟ್ ಆಗಿದ್ದರು. ಇವರು 4 ಇನಿಂಗ್ಸ್‌ನಲ್ಲಿ 140 ರನ್‌ ಸಿಡಿಸಿದ್ದಾರೆ. ಸಣ್ಣ ಇನ್ನಿಂಗ್ಸ್​ ಆಡಿದ್ರೂ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು ಎನ್ನಬಹುದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow