Fake Notes: 500ರ ನೋಟಿನಲ್ಲಿ ಗಾಂಧಿ ಜಾಗದಲ್ಲಿ ನಟ ಅನುಪಮ್ ಖೇರ್..!? 1.30 ಕೋಟಿ ಹಣ ಪ್ರಿಂಟ್...!

ಗಾಂಧೀನಗರ: ಖೋಟಾ ನೋಟಿನಲ್ಲಿ ಗಾಂಧಿ ಫೋಟೋ ಬದಲು ಬಾಲಿವುಡ್ ನಟ ಅನುಪಮ್ ಖೇರ್ ಫೋಟೋ ಬಳಸಿದ್ದಾರೆ. ಈ ನೋಟನ್ನು ವ್ಯಾಪಾರಿಗಳ ಸೋಗಿನಲ್ಲಿ ಬಂದು ಚಿನ್ನಾಭರಣದ ವ್ಯಾಪಾರಿಗೆ ವಂಚಿಸಿದ ಘಟನೆ ಅಹಮ್ಮದಾಬಾದ್‌ನಲ್ಲಿ ನಡೆದಿದೆ. ಹೌದು ವ್ಯಾಪಾರಿ ಮೆಹುಲ್ ಥಕ್ಕರ್ ಅನ್ನೋ ಚಿನ್ನಾಭರಣ ವ್ಯಾಪಾರಿ ಇದೀಗ ನವರಂಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೆಹುಲ್ ಥಕ್ಕರ್ ವ್ಯಾಪಾರಿಯ ಸಿಬ್ಬಂದಿಯನ್ನು ಕೆಲವರು ಸಂಪರ್ಕಿಸಿದ್ದಾರೆ. ಬಳಿಕ 2,100 ಗ್ರಾಂ ಚಿನ್ನ ಖರೀದಿಸಲು ವ್ಯಾಪಾರ ಕುದುರಿಸಿದ್ದಾರೆ. ತಮ್ಮ ಜ್ಯೂವೆಲ್ಲರಿಗೆ ಮಾರಾಟ ಮಾಡಲು 2,100 ಗ್ರಾಂ ಚಿನ್ನ ಖರೀದಿಸಲು ಒಪ್ಪಂದ ಮಾಡಿದ್ದಾರೆ. ಒಟ್ಟು 1.6 ಕೋಟಿ ಮೌಲ್ಯದ ಚಿನ್ನ ಖರೀದಿಗೆ ಒಪ್ಪಂದವಾಗಿದೆ.
ಜಿಎಸ್‌ಟಿ, ಇತರ ತೆರಿಗೆ ಕಾರಣಗಳಿಂದ ತಾವು ನಗದು ಹಣ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ವ್ಯಾಪಾರಿ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಚಿನ್ನ ಖರೀದಿಸಿದ ಬಳಿಕ 1.3 ಕೋಟಿ ರೂಪಾಯಿ ನಗದು ಹಣ ನೀಡಿದ್ದಾರೆ. ಈ ಹಣ ಎಣಿಸುತ್ತಿರುವಾಗ ಇನ್ನುಳಿದ 30 ಲಕ್ಷ ರೂಪಾಯಿ ಹಣ ತರುವುದಾಗಿ ಹೇಳಿದ್ದಾರೆ. 2,100 ಗ್ರಾಂ ಚಿನ್ನ ನೀಡಿ ಕಂತೆ ಕಂತೆ ನೋಟಿನ ಬ್ಯಾಗ್ ಪಡೆದುಕೊಂಡಿದ್ದಾರೆ.
ವ್ಯಾಪಾರಿಗಳ ಸೋಗಿನಲ್ಲಿ ಬಂದ ಖದೀಮರು ಚಿನ್ನ ಹಿಡಿದು ಪರಾರಿಯಾಗಿದ್ದಾರೆ. ಇತ್ತ 1.3 ಕೋಟಿ ರೂಪಾಯಿ ಎಣಿಸಲು ಮುಂದಾದಾಗ ತಾವು ಮೋಸಹೋಗಿರುವುದು ಅರಿವಾಗಿದೆ. ಕಾರಣ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡಿದ್ದಾರೆ. ಈ ಪೈಕಿ ಮೇಲಿನ ಕಂತೆ ಕಂತೆ ನೋಟುಗಳ ಮೇಲಿನ ನೋಟು ಮಾತ್ರ ಅಸಲಿ. ಇನ್ನುಳಿದ ನೋಟು ನಕಲಿ. ನಕಲಿ ನೋಟಿನಲ್ಲಿ ಗಾಂಧಿ ಫೋಟೋ ಇಲ್ಲ, ಬದಲು ಅನುಪಮ್ ಖೇರ್ ಫೋಟೋ ಬಳಸಲಾಗಿದೆ.
ಇನ್ನೂ ಅಹಮದಾಬಾದ್ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್ ಆಗಿರುವ ವೀಡಿಯೋವನ್ನು ಟ್ಯಾಗ್ ಮಾಡಿ ಅನುಪಮ್ ಖೇರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






