5-6 ಜನರ ಗ್ಯಾಂಗ್ ನಿಂದ ಅತ್ಯಾಚಾರ ನಡೆದಿತ್ತು: ವೇದಿಕೆಯಲ್ಲೇ ಕಣ್ಣೀರಿಟ್ಟ ನಟಿ!

ಸ್ಟಾರ್ ನಟಿ ವರಲಕ್ಷ್ಮಿ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅಲ್ಲದೇ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ವರಲಕ್ಷ್ಮಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ʻಮಾಣಿಕ್ಯʼ ಸಿನಿಮಾ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾದ ವರಲಕ್ಷ್ಮಿ ಶರತ್‌ಕುಮಾರ್, ಕಳೆದ ಡಿಸೆಂಬರ್ 2024 ರಲ್ಲಿ ರಿಲೀಸ್ ಆಗಿ ದೊಡ್ಡ ಹಿಟ್ ಕಂಡಂತಹ ಕಿಚ್ಚ ಸುದೀಪ್ ನಟನೆಯ ʻಮ್ಯಾಕ್ಸ್ʼ ಸಿನಿಮಾದಿಂದಲ್ಲೂ ಹವಾ ಎಬ್ಬಿಸಿದ್ದರು. ಇದೀಗ ತಮಿಳು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವರಲಕ್ಷ್ಮಿ ತಮ್ಮ ಬಾಲ್ಯದಲ್ಲಿ ಎದುರಿಸಿದ ಕಹಿ ಘಟನೆಯನ್ನು ನೆನೆದು ಕಣ್ಣೀರಾಕಿದ್ದಾರೆ.
ವೇದಿಕೆ ಮೇಲೆ ಮಾತಾಡಿದ ಅವರು, ನಿಮ್ಮ ನೋವು ನನಗೆ ಗೊತ್ತು. ನನ್ನ ಹೆತ್ತವರು ಕೆಲಸದಲ್ಲಿ ನಿರತರಾಗಿದ್ದರು. ಆದ್ದರಿಂದ ನಾನು ಮಗುವಾಗಿದ್ದಾಗ ಅವರು ನನ್ನನ್ನು ಮನೆಯಲ್ಲಿಯೇ ಬಿಡುತ್ತಿದ್ದರು. ಆಗ ನನ್ನನ್ನು ಕೆಲವು ದಿನಗಳ ಕಾಲ ಸಂಬಂಧಿಕರ ಮನೆಗೆ ಕಳುಹಿಸಲಾಯಿತು. ಈ ವೇಳೆ ಐದು ಅಥವಾ ಆರು ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಹೀಗಾಗಿ ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಕಲಿಸಬೇಕು ಎಂದು ಪೋಷಕರಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ. ಸದ್ಯ ನಟಿ ವರಲಕ್ಷ್ಮಿ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿಚ್ಚ ಸುದೀಪ್ ನಟನೆಯ ʻಮ್ಯಾಕ್ಸ್ʼ ಸಿನಿಮಾದಲ್ಲಿಯೂ ನಟಿ ನಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






