ಸಿಕ್ಕ ಸಿಕ್ಕವರ ಮೇಲೆ ಚಾಕು ಹಾಕುತ್ತಿದ್ದ ಪುಡಿ ರೌಡಿ ವಿರುದ್ಧ FIR ದಾಖಲು!

ಫೆಬ್ರವರಿ 10, 2025 - 21:45
 0  31
ಸಿಕ್ಕ ಸಿಕ್ಕವರ ಮೇಲೆ ಚಾಕು ಹಾಕುತ್ತಿದ್ದ ಪುಡಿ ರೌಡಿ ವಿರುದ್ಧ FIR ದಾಖಲು!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜೈಲಿಂದ ಹೊರಬಂದ ಪುಡಿರೌಡಿಯ ಅಟ್ಟಹಾಸ ಮಿತಿಮೀರಿದ್ದು, ಸಿಕ್ಕ ಸಿಕ್ಕವರಿಗೆ ಚಾಕು ಇರಿದಿದ್ದಾನೆ. 

ಕುಡಿದ ಮತ್ತಲ್ಲಿ ಸಿಕ್ಕಸಿಕ್ಕವರ ಜೊತೆ ಗಲಾಟೆ ಮಾಡಿ ಚಾಕು ಹಾಕಿದ ರೌಡಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. 

ಇತ್ತೀಚಿಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಈ ಚಿಲ್ಲರೆ ದುಷ್ಕರ್ಮಿಯು ಡ್ರ್ಯಾಗನ್ ಹಿಡಿದು ಏರಿಯಾದಲ್ಲಿ ಸಿಕ್ಕಸಿಕ್ಕವರಿಗೆ ಹಲ್ಲೆ ಎಸೆಗಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊದಲು ಪಾನಿ ಪುರಿ ಅಂಗಡಿಯನ ಜೊತೆ ಕಿರಿಕ್ ನಡೆಸಿದ್ದ. ಗಲಾಟೆ ವೇಳೆ ಚಾಕು ಇರಿದಿದ್ದಲ್ಲದೇ ಗಲಾಟೆಯನ್ನು ತಡೆಯಲು ಬಂದ ಮತ್ತೆ ಮೂವರಿಗೆ ಡ್ರ್ಯಾಗನ್ ಇರಿದು ಪರಾರಿಯಾಗಿದ್ದಾನೆ.

ಇತ್ತೀಚೆಗಷ್ಟೇ ಜೈಲಿನಿಂದ ರಿಲೀಸ್ ಆಗಿ ಹೊರ ಬಂದಿದ್ದ ರೌಡಿ ಕದಂಬ ಇದೀಗ ಮತ್ತೆ ಏರಿಯಾದಲ್ಲಿ ಪುಂಡಾಟ ಮೆರೆದಿದ್ದಾನೆ. ಇದೀಗ ಇಂದಿರಾನಗರ ಪೊಲೀಸರಿಂದ ತಲಾಶ್ ಮುಂದುವರಿದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow