ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ ಎಂದ ಬಿ.ಆರ್ ಪಾಟೀಲ್..! ಶಾಸಕ ಹೇಳಿಕೆಗೆ ಸಿಎಂ ಹೇಳಿದ್ದೇನು..?

ಮಂಡ್ಯ: ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ ಆಡಿದ್ದ ಅಬ್ಬರದ ಮಾತು ಕಾಂಗ್ರೆಸ್ ಮನೆಯನ್ನನ್ನು ನಡುಗಿಸಿತ್ತು. ಸರ್ಕಾರವನ್ನು ಅಲುಗಾಡಿಸಿತ್ತು. ವಸತಿ ಯೋಜನೆಯಲ್ಲಿ ಮನೆ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ಬಿಆರ್ ಪಾಟೀಲ್ ಆರೋಪದಿಂದ ಶುರುವಾದ ಅಸಮಾಧಾನದ ಜ್ವಾಲೆ ಕೈಪಡೆಯನ್ನು ಬಡಿದೆಬ್ಬಿಸಿತ್ತು.
ಇದೀಗ ಮೀಟಿಂಗ್ ನಡೆದ ಮರುದಿನವೇ ಆಪ್ತರ ಜೊತೆ ಮಾತಾಡ್ತಾ ಬಿ.ಆರ್ ಪಾಟೀಲ್ ಬೇಸರ ಹೊರಹಾಕಿದ್ದಾರೆ. ಮಂಡ್ಯದ ಕೆಆರ್ ಪೇಟೆಯಲ್ಲಿ ಫೋನ್ನಲ್ಲಿ ಆಪ್ತರ ಜೊತೆ ಮಾತಾಡ್ತಿದ್ದ ಶಾಸಕ ಬಿಆರ್ ಪಾಟೀಲ್ ಅವರು, ಸಿದ್ದರಾಮಯ್ಯ ಲಕ್ಕಿ, ಲಾಟರಿ ಹೊಡೆದುಬಿಟ್ಟ. ಮುಖ್ಯಮಂತ್ರಿಯೂ ಆಗಿಬಿಟ್ಟ ಎಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಅವರನ್ನ ಮೊದಲು ಭೇಟಿ ಮಾಡಿಸಿದವನು ನಾನೇ.
ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ. ಇದು ನನ್ನ ಗ್ರಹಚಾರ ಎಂದು ಪರೋಕ್ಷವಾಗಿ ಬಿಆರ್ ಪಾಟೀಲ್ ಬೇಸರ ಹೊರಹಾಕಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್ ಪಾಟೀಲ್ ದೂರವಾಣಿ ಮೂಲಕ ಆಪ್ತರೊಡನೆ ಮಾತುಕತೆ ನಡೆಸಿದ ವಿಡಿಯೋ ರೆಕಾರ್ಡ್ ಆಗಿದೆ. ನಮಗೆ ಗಾಡು ಇಲ್ಲ, ಫಾದರೂ ಇಲ್ಲ. ಸುರ್ಜೇವಾಲಾ ಅವರನ್ನ ಭೇಟಿಯಾಗಿ ಮಾತನಾಡಿದ್ದೇನೆ.
ತುಂಬಾ ಗಂಭೀರವಾಗಿ ನನ್ನ ಮಾತುಗಳನ್ನ ಆಲಿಸಿದ್ದಾರೆ ಎಂದ್ರು.ಇನ್ನೂ ಶಾಸಕ ಪಿಆರ್ ಪಾಟೀಲ್ ಅವರ ಮಾತಿಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತಾಡಿದ್ದು, ಹೌದಪ್ಪ ನಾನು ಅದೃಷ್ಟವಂತ, ಸಿಎಂ ಆಗಿದ್ದೀನಿ. ನಾನೂ ಅವನೂ ಒಟ್ಟಿಗೆ ಶಾಸಕರಾಗಿದ್ವಿ ಎಂದು ಹೇಳಿದರು. ಹೌದಯ್ಯ ಅವನು ಹೇಳಿದ್ದಾನೆ. ಅದಕ್ಕೆ ನಾನು ಏನು ಮಾಡಲಿ ಹೇಳಿ, ಬಿ ಆರ್ ಪಾಟೀಲ್ ಕರೆಸಿ ಮಾತಾಡ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






