ಸುವರ್ಣಸೌಧದಲ್ಲೇ ಅರೆಸ್ಟ್ ಆದ್ರೂ ಬಿಜೆಪಿ MLC ಸಿಟಿ ರವಿ!

ಬೆಳಗಾವಿ:- ಬಿಜೆಪಿ MLC ಸಿಟಿ ರವಿ ಅವರನ್ನು ಸುವರ್ಣಸೌಧದಲ್ಲೇ ಅರೆಸ್ಟ್ ಮಾಡಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಆರೋಪದಡಿ ಅರೆಸ್ಟ್ ಮಾಡಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸಿಟಿ ರವಿ ಅವರನ್ನು ಬಂಧಿಸಿದ್ದಾರೆ.
ಬಲವಂತಾಗಿಯೇ ಪೊಲೀಸರು ಸುವರ್ಣಸೌಧದಿಂದ ಸಿಟಿ ರವಿ ಅವರನ್ನು ಎತ್ತಿಕೊಂಡು ಬಂದು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಇಬ್ಬರು ಎಸ್ಪಿ ರ್ಯಾಂಕ್ನ ಅಧಿಕಾರಿಗಳು, ನಾಲ್ಕು ಎಸ್ಕಾರ್ಟ್, ಎರಡು ಕೆಎಸ್ಆರ್ಪಿ ತುಕಡಿ ಭದ್ರತೆಯಲ್ಲಿ ಸಿಟಿ ರವಿ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






