ಶೇವ್ ಮಾಡದ್ದಕ್ಕೆ ಗಂಡನನ್ನು ಬಿಟ್ಟು ಕ್ಲೀನ್ ಶೇವ್ ಮಾಡಿದ್ದ ಆತನ ತಮ್ಮನ ಜೊತೆ ಪರಾರಿಯಾದ ಪತ್ನಿ..!

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿಚಿತ್ರ ದಾಂಪತ್ಯ ಕಲಹ ಪ್ರಕರಣವೊಂದರಲ್ಲಿ, ಗಡ್ಡ ಬೋಳಿಸಲು ನಿರಾಕರಿಸಿದ ನಂತರ ಮಹಿಳೆಯೊಬ್ಬಳು ತನ್ನ ಪತಿಯನ್ನು ತೊರೆದು ಕ್ಲೀನ್ ಶೇವ್ ಮಾಡಿದ ಮೈದುನನೊಂದಿಗೆ ಓಡಿಹೋದ ಘಟನೆ ವರದಿಯಾಗಿದೆ. ಮಹಿಳೆ ತನ್ನ ಪತಿಗೆ ಕ್ಲೀನ್ ಶೇವ್ ಮಾಡಿಸಿಕೊಳ್ಳುವಂತೆ ಪದೇ ಪದೇ ಕೇಳಿಕೊಂಡಿದ್ದರು, ಆದರೆ ಧಾರ್ಮಿಕ ನಂಬಿಕೆಗಳನ್ನು ಉಲ್ಲೇಖಿಸಿ ಅವರು ನಿರಾಕರಿಸಿದರು.
ಹೌದು ಮಹಿಳೆ ಮೀರತ್‌ನಲ್ಲಿ ಮೌಲಾನಾ ಒಬ್ಬರನ್ನು ವಿವಾಹವಾಗಿದ್ದಳು, ಮದುವೆಯ ಸಮಯದಲ್ಲಿ ಗಂಡನಿಗಿದ್ದ ಗಡ್ಡ ಆಕೆಗೆ ಇಷ್ಟವಾಗಲಿಲ್ಲ. ಆಕೆ ತನ್ನ ಮನಸ್ಸಿನಲ್ಲಿರುವುದನ್ನು ಗಂಡನ ಬಳಿ ಹೇಳಿಕೊಂಡು ಗಡ್ಡವನ್ನು ಬೋಳಿಸಲು ಕೇಳಿದ್ದಾಳೆ. ಆದರೆ ಆತ ಅದನ್ನು ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.
ಆದರೆ ಸ್ವಲ್ಪ ಸಮಯದ ನಂತರ ಆಕೆ ಜಗಳವಾಡುವುದನ್ನು ನಿಲ್ಲಿಸಿದ್ದಳು, ಅದು ಬಿರುಗಾಳಿ ಬರುವುದಕ್ಕೂ ಮುನ್ನ ಇರುವ ಶಾಂತತೆಯ ರೀತಿ ಅನಿಸುತ್ತಿತ್ತು. ಆಕೆ ತನ್ನ ಗಂಡನ ತಮ್ಮನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ಬಳಿಕ ಆಕೆ ಮೈದುನನ ಜತೆ ಓಡಿ ಹೋಗಿದ್ದಾಳೆ. ಆತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಕೆಯನ್ನು ಹುಡುಕಲಾಗುತ್ತಿದೆ.
ಮೀರತ್‌ನ ಲಿಸಾಡಿ ಗೇಟ್‌ನ ಉಜ್ವಲ್ ಗಾರ್ಡನ್‌ನಲ್ಲಿ ಇಬ್ಬರು ವಾಸವಿದ್ದರು. ಏಳು ತಿಂಗಳ ಹಿಂದೆ ಇಂಚೌಲಿಯ ಯುವತಿಯನ್ನು ವಿವಾಹವಾಗಿದ್ದರು. ಅವನು ತನ್ನೊಂದಿಗೆ ವಾಸಿಸಲು ಬಯಸಿದರೆ, ಅವನು ತನ್ನ ಗಡ್ಡವನ್ನು ಬೋಳಿಸಿಕೊಳ್ಳಬೇಕು ಎಂದು ಆ ಮಹಿಳೆ ಹೇಳಿದಳು. ಆದರೆ ಇದಾದ ನಂತರವೂ ಪತಿ ಕೇಳದಿದ್ದಾಗ, ಮಹಿಳೆ ತನ್ನ ಮೈದುನನ ಜತೆ ಓಡಿ ಹೋಗಿದ್ದಾಳೆ. ದೂರಿನಲ್ಲಿ ಪತಿ ಇಬ್ಬರ ನಡುವಿನ ಪ್ರೇಮ ಸಂಬಂಧವನ್ನು ಉಲ್ಲೇಖಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






