ಲವ್ ಟ್ರ್ಯಾಪ್: ಪ್ರಿಯಕರನನ್ನು ಮನೆಗೆ ಬರುವಂತೆ ಕರೆದು ಗುಪ್ತಾಂಗ ಕತ್ತರಿಸಿದ ಪ್ರೇಯಸಿ..!

ಎಪ್ರಿಲ್ 18, 2025 - 22:09
 0  8
ಲವ್ ಟ್ರ್ಯಾಪ್: ಪ್ರಿಯಕರನನ್ನು ಮನೆಗೆ ಬರುವಂತೆ ಕರೆದು ಗುಪ್ತಾಂಗ ಕತ್ತರಿಸಿದ ಪ್ರೇಯಸಿ..!

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 22 ವರ್ಷದ ವ್ಯಕ್ತಿಯೊಬ್ಬನ ಮೇಲೆ ಆತನ ಗೆಳತಿ ಮತ್ತು ಆಕೆಯ ನಾಲ್ವರು ಸಹೋದರರು ಹಲ್ಲೆ ನಡೆಸಿ, ಆತನ ಗುಪ್ತಾಂಗ ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕನ ಕುಟುಂಬವು ಈಗಾಗಲೇ ದೀರ್ಘಕಾಲದ ವಿವಾದದಲ್ಲಿ ಸಿಲುಕಿಕೊಂಡಿದ್ದರಿಂದ, ಆ ಮಹಿಳೆ ಆತನನ್ನು "ಪ್ರೀತಿಯ ಬಲೆಗೆ" ಸಿಲುಕಿಸಿದ್ದಾರೆ ಎಂದು ಆರೋಪಿಸಿದೆ.

ಮಿಥುನ್ ಕುಮಾರ್ ಎಂಬಾತ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದ, ಆಕೆಯ ಆತನಿಗಿಂತ 8 ವರ್ಷ ದೊಡ್ಡವಳು. ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಹೊಲದಿಂದ ವಾಪಸಾಗುವಾಗ ಆಕೆ ಆತನಿಗೆ ಕರೆ ಮಾಡಿದ್ದಳು. ನಮ್ಮ ಮನೆಯಿಂದ ಮೂರನೇ ಮನೆಯೇ ಅವರದ್ದು. ಆಕೆ ಎರಡು ವರ್ಷಗಳಿಂದ ಮಿಥುನ್ ಜತೆ ಸಂಪರ್ಕದಲ್ಲಿದ್ದಾಳೆ. ತನ್ನ ಭೇಟಿಯಾಗು ಎಂದು ಆತನಿಗೆ ಕರೆ ಮಾಡಿದ್ದಳು.

ಮಿಥುನ್‌ಗೆ ತಿಳಿಯದೆ ಅಲ್ಲಿಗೆ ಹೋಗಿದ್ದಾನೆ, ಆ ಯುವತಿಯ ನಾಲ್ವರು ಸಹೋದರರು ಅಲ್ಲೇ ಕಾಯುತ್ತಿದ್ದರು ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಅವರು ಮಿಥುನ್​ನನ್ನು ಹಿಡಿದು, ನಿಂದಿಸಿ, ತೀವ್ರವಾಗಿ ಥಳಿಸಿದ್ದಾರೆ. ಸಹೋದರರು ಮಿಥುನ್‌ನ ಕೈ ಮತ್ತು ಕಾಲುಗಳನ್ನು ಕಟ್ಟಿದ್ದರು, ನಂತರ ಆಕೆ ಬ್ಲೇಡ್‌ನಿಂದ ಗುಪ್ತಾಂಗ ಕತ್ತರಿಸಿದ್ದಾಳೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಯಿತು, ನಂತರ ಆರೋಪಿಗಳು ಮಿಥುನ್‌ನನ್ನು ಮನೆಯಿಂದ ಹೊರಗೆ ಎಸೆದಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ನೋಡಿದ ಗ್ರಾಮಸ್ಥರೊಬ್ಬರು ಆತನ ತಂದೆಗೆ ಮಾಹಿತಿ ನೀಡಿದರು. ಬಸಂತ್ ಲಾಲ್ ತನ್ನ ಮಗನನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಮಿಥುನ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನ ಸ್ಥಿತಿ ಗಂಭೀರವಾಗಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow