ಏನ್ ಬ್ಯೂಟಿ ಗುರು: 2 ಮಕ್ಕಳಾದರೂ ಕಮ್ಮಿ ಆಗದ ನಯನ ಸೌಂದರ್ಯ! ಫೋಟೋ ನೋಡಿ ನೆಟ್ಟಿಗರು ಫಿದಾ!

ಸೌತ್ ಬ್ಯೂಟಿ ನಯನತಾರಾ ನಿಜಕ್ಕೂ ಸೌಂದರ್ಯದ ಗಣಿ. 18 ವರ್ಷಕ್ಕೆ 30 ವರ್ಷದವರಂತೆ ಕಾಣುವ ಹುಡುಗಿಯರೆಲ್ಲಿ, 38 ರಲ್ಲೂ 18ರಂತೆ ಕಾಣುವ ನಯನಾ ಎಲ್ಲಿ. ಅಬ್ಬಾ ಎಂತವರು ಕೂಡ ಇವರನ್ನು ನೋಡಿ ಫಿದಾ ಆಗದೇ ಇರಲಾರರು.
ನಟಿ ಪರಿಪೂರ್ಣ ಆಹಾರದ ಜೊತೆಗೆ ವರ್ಕೌಟ್‌ಗಳತ್ತ ಗಮನ ಹರಿಸುತ್ತಾರೆ. ಫಿಟ್‌ನೆಸ್ ಬಗ್ಗೆ ತುಂಬಾ ಜಾಗೃತರಾಗಿರುವ ಅವರು, ಪ್ರತಿದಿನ ವರ್ಕ್ ಔಟ್ ಮಾಡುತ್ತಾರೆ. ಕಾರ್ಡಿಯೋ ಮತ್ತು ತೂಕದ ತರಬೇತಿಯು ಅವರ ನೆಚ್ಚಿನ ಮತ್ತು ಅತ್ಯಂತ ಪ್ರಮುಖ ಫಿಟ್ನೆಸ್ ಮಂತ್ರವಾಗಿದೆ. ಪ್ರತಿದಿನ ವರ್ಕೌಟ್ ಮಾಡೋದನ್ನು ತಪ್ಪಿಸಿಕೊಳ್ಳಲ್ಲ.
ನಯನತಾರಾ ಡಯಟ್ ಬ್ಯಾಲೆನ್ಸ್ ಆಗಿರ್ತಾರೆ. ಕ್ರ್ಯಾಶ್ ಡಯಟ್ ಫಾಲೋ ಮಾಡಲ್ಲ. ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ಹಣ್ಣುಗಳು, ತರಕಾರಿಗಳು, ಮಾಂಸ, ಮೊಟ್ಟೆಗಳು ಮತ್ತು ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಎಲ್ಲಾ ಬಗೆಯ ಆಹಾರಗಳನ್ನು ಸೇವನೆ ಮಾಡುತ್ತಾರೆ.
ನಯನತಾರಾ ಅವರಿಗೆ ಎಳೆನೀರು ಅಂದರೆ ತುಂಬಾ ಇಷ್ಟ. ಬೆಳಗಿನ ದಿನಚರಿಯನ್ನು ಎಳೆನೀರು ಕುಡಿಯುವ ಮೂಲಕವೇ ಆರಂಭಿಸುತ್ತಾರಂತೆ. ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
ನಯನತಾರಾ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಕ್ಕರೆಯಿಂದ ದೂರ ಇದ್ದಾರೆ. ತಮ್ಮ ಆಹಾರದಲ್ಲಿ ಸಂಸ್ಕರಿಸಿದ ಸಕ್ಕರೆಯನ್ನು ತೆಗೆದುಕೊಳ್ಳುವುದಿಲ್ಲ. ಹೆಚ್ಚಾಗಿ ಸಿಹಿಯನ್ನೂ ಅವೈಡ್ ಮಾಡ್ತಾರೆ.
ಸೌತ್ ಇಂಡಸ್ಟ್ರಿ ಮತ್ತು ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಯನತಾರಾ ಸಖತ್ ಫಿಟ್ ಅಂಡ್ ಫೈನ್. ತಮ್ಮ 38ನೇ ವಯಸ್ಸಿನಲ್ಲೂ 18 ವರ್ಷದ ತರುಣಿಯಂತೆ ಕಾಣ್ತಾರೆ. ಎರಡು ಮಕ್ಕಳ ತಾಯಿಯಾದ ನಂತರವೂ ನಯನತಾರಾ ಅವರ ಫಿಟ್ನೆಸ್ಗೆ ಸಲಾಂ ಹೇಳಲೇಬೇಕು. ನಟನೆ ಮತ್ತು ತಮ್ಮ ನೋಟದಿಂದ ಈಗಲೂ ಗಮನ ಸೆಳೆಯುತ್ತಲೇ ಇರುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






