ಇವನೊಬ್ಬ ನೀಚ ಕಾಮುಕ: 3 ವರ್ಷದ ಕಂದನ ಮೇಲೆ ರೇಪ್ ಮಾಡಿ ಕಾಲು ಮುರಿದ ಪಾಪಿ!

ಹರಿಯಾಣ:-3 ವರ್ಷದ ಮಗುವಿನ ಮೇಲೆ ದುಷ್ಟನೊಬ್ಬ ಅತ್ಯಾಚಾರ ಮಾಡಿದ್ದಲ್ಲದೆ ಬಳಿಕ ಕಂದನ ಕಾಲುಗಳನ್ನು ಮುರಿದು ಕೊಂದಿರುವ ಅಮಾನವೀಯ ಘಟನೆ ಹರ್ಯಾಣದಲ್ಲಿ ಜರುಗಿದೆ. ಬಾಲಕಿ ಆಟವಾಡುತ್ತಿದ್ದಾಗ ಸುಮಾರು ಸಂಜೆ 4 ಗಂಟೆ ಸುಮಾರಿಗೆ ಆಕೆಯನ್ನು ಅಪಹರಿಸಿದ್ದಾರೆ. ಬಾಲಕಿ ಎಷ್ಟೊತ್ತಾದರೂ ಅಲ್ಲೆಲ್ಲೂ ಕಾಣಿಸದ ಕಾರಣ ಮನೆಯವರು ಹುಡುಕಾಡಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಆಕೆಯ ರಕ್ತಸಿಕ್ತ ದೇಹ ಪತ್ತೆಯಾಗಿದೆ. ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ ನಂತರ, ಪಿನಾಂಗ್ವಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಗುವಿನ ಮೇಲೆ ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅತ್ಯಾಚಾರವೆಸಗಿದ ಮೇಲೆ ಆರೋಪಿ ಆಕೆಯ ಕೈಕಾಲು ಮುರಿದು ಶವವನ್ನು ಎಸೆದಿದ್ದಾನೆ. ಪ್ರಾಥಮಿಕ ತನಿಖೆಯಿಂದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಬಂಧಿಸಿ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






