ವಿದ್ಯಾರ್ಥಿನಿ ಜೊತೆ ಶಿಕ್ಷಕನ ಲವ್ವಿ-ಡವ್ವಿ: ಹೆಂಡತಿ, ಮಕ್ಕಳನ್ನು ಬಿಟ್ಟು ಯುವತಿಗೆ ಜತೆ ಎಸ್ಕೇಪ್!​ 

ಆಗಸ್ಟ್ 13, 2025 - 22:36
 0  23
ವಿದ್ಯಾರ್ಥಿನಿ ಜೊತೆ ಶಿಕ್ಷಕನ ಲವ್ವಿ-ಡವ್ವಿ: ಹೆಂಡತಿ, ಮಕ್ಕಳನ್ನು ಬಿಟ್ಟು ಯುವತಿಗೆ ಜತೆ ಎಸ್ಕೇಪ್!​ 

ದೊಡ್ಡಬಳ್ಳಾಪುರ: ನಮ್ಮಲ್ಲಿ ವಿದ್ಯೆ ಕಲಿಸುವ ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಆದರೆವಿದ್ಯೆ-ಬುದ್ದಿ ಕಲಿಸೋ ಗುರುಗಳೇ ಅಡ್ಡ ದಾರಿ ಹಿಡಿದ್ರೆ ಹೇಗೆ? ಶಿಕ್ಷಕರನ್ನು  ಮಕ್ಕಳ ಭವಿಷ್ಯ ಬರೆಯೋ ದೇವರು ಅಂತಾರೆ ಆದ್ರೆ ಇಲ್ಲೊಬ್ಬ ಶಿಕ್ಷಕಮದುವೆ ಫಿಕ್ಸ್ ಆಗಿದ್ದ ವಿದ್ಯಾರ್ಥಿನಿ ಜೊತೆಗೆ ಪರಾರಿಯಾಗಿದ್ದಾನೆ.

ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಕನ್ನಡ ಶಿಕ್ಷಕ ಪ್ರವೀಣ್ (45) ವಿದ್ಯಾರ್ಥಿನಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಾರೆ. ಆಗಸ್ಟ್ 11ರಂದು ವಿದ್ಯಾರ್ಥಿನಿಯ ಮದುವೆ ನಿಶ್ಚಯವಾಗಿದ್ದರೂ, ಆಕೆಗೆ ಮದುವೆ ಇಷ್ಟವಿಲ್ಲದ ಕಾರಣ ಶಿಕ್ಷಕನೊಂದಿಗೆ ಪರಾರಿಯಾದಳು.

ಇಬ್ಬರೂ ಆಗಸ್ಟ್ 2ರಂದು ಮನೆ ಬಿಟ್ಟು, ಮೊದಲು ದೆಹಲಿಗೆ ತೆರಳಿ, ನಂತರ ನಂಜನಗೂಡಿನ ಲಾಡ್ಜ್‌ನಲ್ಲಿ ತಂಗಿದ್ದರೆಂದು ಮಾಹಿತಿ ಲಭ್ಯವಾಗಿದೆ.ಶಿಕ್ಷಕನಿಗೆ ಮೊದಲ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನ ನೀಡದೇ ವಿದ್ಯಾರ್ಥಿನಿಯೊಂದಿಗೆ ಓಡಿಹೋದ ಪ್ರವೀಣ್ ವಿರುದ್ಧ, ಮೊದಲ ಹೆಂಡತಿ ದೂರು ದಾಖಲಿಸಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow