ಅಭಿಮಾನಿಗಳಿಂದ ಭವ್ಯಾ ಗೌಡಗೆ ಸಿಕ್ತು ಬಿಗ್ ಸರ್ಪ್ರೈಸ್!

ಫೆಬ್ರವರಿ 3, 2025 - 22:01
 0  7
ಅಭಿಮಾನಿಗಳಿಂದ ಭವ್ಯಾ ಗೌಡಗೆ ಸಿಕ್ತು ಬಿಗ್ ಸರ್ಪ್ರೈಸ್!

ಬಿಗ್​ಬಾಸ್​ ಕನ್ನಡದ ದೊಡ್ಡ ರಿಯಾಲಿಟಿ ಶೋಗೆ ಸಾಕಷ್ಟು ಅಭಿಮಾನಿಗಳ ಬಳಗವೇ ಇದೆ. ಇಂತಹ ಅಪಾರ ಫ್ಯಾನ್ಸ್ ಬಳಗ ಹೊಂದಿರುವ ಬಿಗ್​ಬಾಸ್ ಶೋಗೆ ಹೋಗಿ ಬಂದ ಪ್ರತಿಯೊಬ್ಬ ಸ್ಪರ್ಧಿಗಳು ಸಖತ್​ ಶೈನ್​ ಆಗುತ್ತಾರೆ. ಅದರಲ್ಲೂ ಬಿಗ್​ಬಾಸ್​ ಮನೆಗೆ ಹೋಗಿ ಕೊನೆಯವರೆಗೂ ಇರೋದು ಅಂದ್ರೆ ತಮಾಷೆಯ ಮಾತಲ್ಲ. ಈ ಬಾರಿಯ ಬಿಗ್​ಬಾಸ್​ ಸೀಸನ್ 11ಕ್ಕೆ ಎಂಟ್ರಿ ಕೊಟ್ಟ ಎಲ್ಲ ಸ್ಪರ್ಧಿಗಳ ಲೈಫ್​ ಚೇಂಜ್​ ಆಗುತ್ತಿದೆ ಅಂತಲೇ ಹೇಳಬಹುದು.

ಏಕೆಂದರೆ ಬಿಗ್​ಬಾಸ್​ ಮನೆಗೆ ಕಾಲಿಟ್ಟ ದಿನದಿಂದ ಆಚೆ ಬರುವವರೆಗೂ ಅಭಿಮಾನಿಗಳು ಹೆಚ್ಚುತ್ತಲೇ ಇರುತ್ತಾರೆ. ಅದರಂತೆ ಈ ಬಾರಿಯ ಬಿಗ್​ಬಾಸ್​ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ ಅವರಿಗೆ ಅಭಿಮಾನಿಗಳಿಂದ ಬರಪೂರ ಪ್ರೀತಿ ಸಿಕ್ಕಿದೆ. 

ಎಸ್  ಬಿಗ್ ಬಾಸ್ ಸೀಸನ್ 11 ರಲ್ಲಿ ಫಿನಾಲೆ ವರೆಗೆ ಟಫ್ ಫೈಟ್ ಕೊಟ್ಟಿದ್ದ ಸ್ಪರ್ಧಿ ಭವ್ಯ ಗೌಡ ಇದೀಗ ಬಿಗ್ ಬಾಸ್ ಯಶಸ್ಸಿನ ಅಲೆಯಲ್ಲಿದ್ದಾರೆ. ಎಲ್ಲಿ ಹೋದರು ಭವ್ಯ ಗೌಡಾಗೆ ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದರ ನಡುವೆ ಭವ್ಯ ಗೌಡಗೆ ಅಭಿಮಾನಿಗಳು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭವ್ಯ ಗೌಡ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಮೊದಲ ಸ್ಪರ್ಧಿಯಾಗಿ ಭವ್ಯ ಗೌಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಆದರೆ 118 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಇದೀಗ ಭವ್ಯ ಅಭಿಮಾನಿಗಳು ಅವರ ಮನೆಗೆ ತೆರಳಿ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು, ಭವ್ಯ ಗೌಡಗೆ ಅಭಿಮಾನಿಗಳ ಬಳಗ ಪ್ರೀತಿಯ ಉಡುಗೊರೆ ನೀಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭವ್ಯ ಗೌಡ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಮೊದಲ ಸ್ಪರ್ಧಿಯಾಗಿ ಭವ್ಯ ಗೌಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಆದರೆ 118 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಇದೀಗ ಭವ್ಯ ಅಭಿಮಾನಿಗಳು ಅವರ ಮನೆಗೆ ತೆರಳಿ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು, ಭವ್ಯ ಗೌಡಗೆ ಅಭಿಮಾನಿಗಳ ಬಳಗ ಪ್ರೀತಿಯ ಉಡುಗೊರೆ ನೀಡಿದೆ.

ಬಿಗ್ ಬಾಸ್‌ನಿಂದ ಮತ್ತಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಭವ್ಯ ಗೌಡ ಮನೆಗೆ ಅಭಿಮಾನಿಗಳ ಬಳಗವೊಂದು ತೆರಳಿದೆ. ಬಳಿಕ ಭವ್ಯ ಗೌಡ ಭೇಟಿಯಾಗಿ ಉಡುಗೊರೆ ನೀಡಲು ಮುಂದಾಗಿದ್ದಾರೆ. ಆದರೆ ಅಭಿಮಾನಿಗಳು ಮನೆಗೆ ತೆರಳಿದಾಗ ಭವ್ಯ ಗೌಡ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅಭಿಮಾನಿಗಳ ಬಳಗ ಮನೆಯಲ್ಲಿ ಭವ್ಯ ಗೌಡಗೆ ಗಿಫ್ಟ್ ತಲುಪಿಸಲು ಹೇಳಿ ಹೊರಟಿದ್ದಾರೆ. ಇತ್ತ ಭವ್ಯ ಗೌಡ ಮರಳಿ ಮನೆಗೆ ಬಂದಾಗ ಅಭಿಮಾನಿಗಳ ನೀಡಿದ ಗಿಫ್ಟ್‌ನ್ನು ಕುಟುಂಬಸ್ಥರು ಹಸ್ತಾಂತರಿಸಿದ್ದಾರೆ.

ಅಭಿಮಾನಿಗಳು ಭವ್ಯ ಗೌಡ ದೊಡ್ಡ ಫೋಟೋವನ್ನು ಫ್ರೇಮ್ ಹಾಕಿಸಿ ಉಡುಗೊರೆಯಾಗಿ ನೀಡಿದ್ದಾರೆ. ಬಿಗ್ ಬಾಸ್ ಶೋ ಎಪಿಸೋಡ್ ಕೊನೆಯಲ್ಲಿ ಬರುವ ಸ್ಪರ್ಧಿಗಳ ಫೋಟೋ ಹಾಗೂ ಬಿಗ್ ಬಾಸ್ ಎಸ್ಎಂಎಸ್ ವೋಟಿಂಗ್ ಮಾಹಿತಿಯ ಫ್ರೇಮ‌್‌ನ್ನೇ ಫೋಟೋವಾಗಿ ನೀಡಿದ್ದಾರೆ. ಇತ್ತ ಭವ್ಯ ಗೌಡ ಅಭಿಮಾನಿಗಳ ಉಡುಗೊರೆಯಿಂದ ಫುಲ್ ಖುಷ್ ಆಗಿದ್ದಾರೆ. ಈ ಕುರಿತು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ಸರ್ಪ್ರೈಸ್ ಗಿಫ್ಟ್ ನೀಡಿರುವುದಕ್ಕೆ ತುಂಬಾ ಧನ್ಯವಾದ. ನನ್ನ ಮನೆಗೆ ಬಂದು ಈ ಉಡುಗೊರೆ ನೀಡಿದ್ದೀರಿ. ಈ ವೇಳೆ ನಾನು ಮನೆಯಲ್ಲಿ ಇರಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಆದಷ್ಟು ಬೇಗ ನಿಮ್ಮಲ್ಲೆರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಹೀಗೆ ಟಾಸ್ಕ್ ಕ್ವೀನ್‌ನ್ನು ಸದಾ ಪ್ರೀತಿ ಹಾಗೂ ಬೆಂಬಲ ಕೊಟ್ಟು ಬೆಳೆಸಿ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow