ಕಿಚ್ಚನ ಮಾದರಿ ನಡೆ: ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಸುದೀಪ್ ಬೆಂಬಲ!

ಎಪ್ರಿಲ್ 1, 2025 - 18:01
 0  10
ಕಿಚ್ಚನ ಮಾದರಿ ನಡೆ: ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಸುದೀಪ್ ಬೆಂಬಲ!

ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ನಟ ಸುದೀಪ್ ಮನವಿ ಮಾಡಿದ್ದಾರೆ. ಕಿಚ್ಚ ಸುದೀಪ್​ ಫ್ಯಾನ್​ ಪೇಜ್​​ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ನಟನ ಹೃದಯ ಕಂದಮ್ಮನಿಗಾಗಿ ಮಿಡಿದಿರುವುದನ್ನು ಕಾಣಬಹುದು.

ಕೀರ್ತನ ಎಂಬ ಮುಗ್ಧ ಮಗು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂ. ಖರ್ಚಾಗಲಿದೆ. ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನೀವೂ ಸಹಾಯ ಮಾಡಿ ಎಂದು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಒಂದೂವರೆ ವರ್ಷದ ಈ ಕೀರ್ತನಾ ಅಪರೂಪದ ಜೆನೆಟಿಕಲ್ ಡಿಸಾರ್ಡರ್‌ಗೆ ತುತ್ತಾಗಿದೆ.

ಕೀರ್ತನಾ ಸೂಕ್ತ ಚಿಕಿತ್ಸೆ ನೀಡಲು 16 ಕೋಟಿ ರೂಪಾಯಿ ಅಗತ್ಯವಿದ್ದು, ಮಗುವಿಗಾಗಿ ಪೋಷಕರ ಪರವಾಗಿ ಕಿಚ್ಚ ಸುದೀಪ್‌ ಮನವಿ ಮಾಡಿದ್ದಾರೆ.ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿರೋ ಕಿಶೋರ್ ಎಂಬುವವರ ಪುತ್ರಿಯೇ ಈ ಕೀರ್ತನಾ. ಕಿಶೋರ್ ಅವರು ಮಗಳ ಜೀವ ಉಳಿಸಲು ತನ್ನ ಆಸ್ತಿಯನ್ನೆಲ್ಲಾ ಮಾರಿ ಹೋರಾಟ ಮಾಡುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow