ದಾಂಪತ್ಯ ಜೀವನಕ್ಕೆ ಕಾಲಿಟ್ಟ BIGGBOSS ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ..!

ಮೇ 9, 2025 - 14:03
 0  24
ದಾಂಪತ್ಯ ಜೀವನಕ್ಕೆ ಕಾಲಿಟ್ಟ BIGGBOSS ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ..!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ಫೈರ್‌ ಬ್ರ್ಯಾಂಡ್‌ ಅಂತಲೇ ಫೇಮಸ್ ಆಗಿರೋ ಚೈತ್ರಾ ಕುಂದಾಪುರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಕ್ರವಾರ ಕುಂದಾಪುರದಲ್ಲಿ ಚೈತ್ರಾ ಕುಂದಾಪುರ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆ ಆಗುತ್ತಿರುವ ವ್ಯಕ್ತಿಯ ಹೆಸರು ಹಾಗೂ ಅವರ ಹಿನ್ನೆಲೆ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.  ಚೈತ್ರಾ ಕುಂದಾಪುರ ಅವರು ವಿವಾದದ ಮೂಲಕ ಸುದ್ದಿ ಆದವರು.

ವಿಧಾನಸಭೆ ಟಿಕೆಟ್ ಕೊಡೋದಾಗಿ ನಂಬಿಸಿ ಕುಂದಾಪುರ ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಇವರ ಮೇಲೆ ಇದೆ. ಈ ಪ್ರಕರಣ ಇನ್ನೂ ಕೋರ್ಟ್​ನಲ್ಲಿ ಇದೆ. ಈ ಕಾರಣಕ್ಕೆ ಅವರು ಟ್ರೋಲ್ ಆದರು. ಆದರೆ ಬಿಗ್ ಬಾಸ್ ಮನೆ ಅವರ ಬದುಕನ್ನು ಬದಲಿಸಿತು. ಅವರ ಮೇಲೆ ಪಾಸಿಟಿವ್ ಟಾಕ್​ಗೆ ಈ ಶೋ ಸಹಾಯ ಆಯಿತು. ಆ ಬಳಿಕ ‘ಬಾಯ್ಸ್ vs ಗರ್ಲ್ಸ್​ ಶೋಗೆ ಬಂದರು. ಈಗ ಅವರು ಹಸೆಮಣೆ ಏರಿದ್ದಾರೆ.

ಶ್ರೀಕಾಂತ್ ಕಶ್ಯಪ್ ಅವರ ಜೊತೆ ಚೈತ್ರಾ ವಿವಾಹ ನಡೆದಿದೆ. ಚೈತ್ರಾ ಅವರು ಹಾರ ಬದಲಿಸಿಕೊಂಡಿದ್ದಾರೆ. ಶ್ರೀಕಾಂತ್ ಅವರು ಓದಿರೋದು ಅನಿಮೇಷನ್. ಆದರೆ, ಅವರಿಗೆ ನಕ್ಷತ್ರಗಳು, ಖಗೋಳಶಾಸ್ತ್ರ ಮತ್ತು ಬ್ರಹ್ಮಾಂಡದ ಬಗ್ಗೆ ತೀವ್ರ ಆಸಕ್ತಿ ಹೊಂದಿರೋ ವ್ಯಕ್ತಿ ಆಗಿದ್ದಾರೆ. ಇವರ ದಾಂಪತ್ಯಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ವಿವಾಹ ಆಗುವ ಆಲೋಚನೆಯಲ್ಲಿ ಇದ್ದರು. ಆದರೆ, ಆಗ ಅವರಿಗೆ ‘ಬಾಯ್ಸ್ vs ಗರ್ಲ್ಸ್’ ಶೋನ ಆಫರ್ ಬಂತು. ಇದನ್ನು ಒಪ್ಪಿದ್ದರಿಂದ ಪ್ರತಿ ವಾರ ಈ ಶೋನ ಶೂಟ್​ಗೆ ಅವರು ಹೋಗಬೇಕಿತ್ತು. ಈ ಕಾರಣಕ್ಕೆ ವಿವಾಹ ವಿಳಂಬ ಆಯಿತು. ಈಗ ಇವರು ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿಕೊಂಡಿದ್ದು, ವಿವಾಹ ಆಗಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow