IPL 2025: RCBಗೆ 174 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ! RR ವಿರುದ್ಧ ಗೆಲುವು ಪಡೆಯುತ್ತಾ ಬೆಂಗಳೂರು.?

ಎಪ್ರಿಲ್ 13, 2025 - 17:37
 0  13
IPL 2025: RCBಗೆ 174 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ! RR ವಿರುದ್ಧ ಗೆಲುವು ಪಡೆಯುತ್ತಾ ಬೆಂಗಳೂರು.?

ಐಪಿಎಲ್ 2025 ರ 28 ನೇ ಪಂದ್ಯವು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. 20ನೇ ಓವರ್‌ನ ಕೊನೆಯ ಎಸೆತದಲ್ಲಿ ನಿತೀಶ್ ರಾಣಾ ಅದ್ಭುತ ಬೌಂಡರಿ ಬಾರಿಸಿದರು.

ಈ ಓವರ್‌ನಲ್ಲಿ ರಾಜಸ್ಥಾನ್ 11 ರನ್ ಗಳಿಸಿತು. ಇದರೊಂದಿಗೆ ರಾಜಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 173 ರನ್ ಗಳಿಸಿದೆ. ಕೊನೆಯಲ್ಲಿ ಧ್ರುವ್ ಜುರೆಲ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು 23 ಎಸೆತಗಳಲ್ಲಿ 35 ರನ್ ಗಳಿಸಿದರು. ಅವರ ಇನ್ನಿಂಗ್ಸ್ ಆಧಾರದ ಮೇಲೆ ರಾಜಸ್ಥಾನ್ ಬೆಂಗಳೂರು ತಂಡಕ್ಕೆ 174 ರನ್‌ಗಳ ಗುರಿಯನ್ನು ನೀಡಿದೆ.

ಬಳಿಕ ಕ್ರೀಸ್​ಗೆ ಬ್ಯಾಟ್​ ಹಿಡಿದು ಬಂದ ರಿಯಾನ್ ಪರಾಗ್ ಯಶಸ್ವಿ ಜೈಸ್ವಾಲ್​ಗೆ ಜೊತೆಯಾದರು. ಈ ಪಂದ್ಯದಲ್ಲಿ ಅಮೋಘವಾದ ಅರ್ಧಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​ ಆರ್​​ಸಿಬಿ ಬೌಲರ್​ಗಳಿಗೆ ಬೆವರಿಳಿಸಿದರು. ಕೇವಲ 35 ಎಸೆತದಲ್ಲಿ 1 ಸಿಕ್ಸರ್​ ಹಾಗೂ 7 ಭರ್ಜರಿ ಬೌಂಡರಿಗಳಿಂದ ಹಾಫ್​ಸೆಂಚುರಿ ಸಿಡಿಸಿದರು. ಒಟ್ಟು 47 ಎಸೆತ ಎದುರಿಸಿದ ಜೈಸ್ವಾಲ್​ 10 ಫೋರ್, 2 ಸಿಕ್ಸರ್​ನಿಂದ 75 ರನ್​ಗೆ ಜೋಶ್​ ಹ್ಯಾಜೆಲ್ವುಡ್​ ಬೌಲಿಂಗ್​ನಲ್ಲಿ ಎನ್​ಬಿಗೆ ವಿಕೆಟ್​ ಒಪ್ಪಿಸಿದರು.

ಆರ್​ಸಿಬಿ ಜೊತೆ ಹೆಟ್ಮರ್​ (9) ವಿಫಲ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. ಧೃವ್ ಜುರೆಲ್ ಕೊಂಚ ತಂಡಕ್ಕಾಗಿ ಹೋರಾಟ ಮಾಡಿ ರನ್​ಗಳ ಕೊಳ್ಳೆ ಹೊಡೆದರು. 25 ಎಸೆತದಲ್ಲಿ 35 ರನ್​ಗಳಿಂದ ಅಜೇಯರಾಗಿ ಉಳಿದರು. ಇದರಿಂದ ರಾಜಸ್ಥಾನ ರಾಯಲ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 174 ರನ್​ಗಳ ಗುರಿಯನ್ನು ಆರ್​ಸಿಬಿಗೆ ನೀಡಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow