Anushka Shetty: “ಬಾಹುಬಲಿ” ಹೀರೋಯಿನ್ ಅನುಷ್ಕಾ ಶೆಟ್ಟಿ ಕೈಯಲ್ಲಿದೆ ಬರೋಬ್ಬರಿ 7 ಸಿನಿಮಾಗಳು! ಸ್ವೀಟಿ ಫುಲ್ ಬ್ಯುಸಿ

ಪುರಿ ಜಗನ್ನಾಥ್ ನಿರ್ದೇಶನದ ನಾಗಾರ್ಜುನ ಅಭಿನಯದ ಸೂಪರ್ ಚಿತ್ರದ ಮೂಲಕ ಅನುಷ್ಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು. ಅದಾದ ನಂತರ ಡಾನ್, ಅರುಂಧತಿ, ಬಾಹುಬಲಿ, ಚಿಂತಕಾಯಲ ರವಿ, ಮತ್ತು ವಿಕ್ರಮಾರ್ಕುಡು ಮುಂತಾದ ಅನೇಕ ದೊಡ್ಡ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ನಟಿಸುವ ಮೂಲಕ ಅನುಷ್ಕಾ ಶೆಟ್ಟಿ ಸ್ಟಾರ್ ನಟಿಯಾದ್ರು.
ಅರುಂಧತಿ ಚಿತ್ರದ ಬಳಿಕ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಮೂಲಕ ಅವರು ತಮ್ಮನ್ನು ಮಹಿಳಾ ಸೂಪರ್ ಸ್ಟಾರ್ ಆಗಿ ಮಿಂಚಿದ್ರು. ಅನುಷ್ಕಾ ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಗಮನ ಸೆಳೆದಿದ್ದಾರೆ. ಸ್ವೀಟಿ ಅಂತಾನೆ ಅಭಿಮಾನಿಗಳು ಅವರನ್ನು ಕರೀತಾರೆ.
ಇದೀಗ ಅನುಷ್ಕಾ ಶೆಟ್ಟಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಅದ್ಭುತ ನಟಿ ಅನುಷ್ಕಾ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಬಾಹುಬಲಿ, ಅರುಂಧತಿ ಅಂತಹ ಸಿನಿಮಾಗಳೇ ಸಾಕ್ಷಿ. ಹಾಗಾಗಿ ಇದೇ ರೀತಿಯ ವಿಭಿನ್ನ ಎಂದೆಸಿದ ಸಿನಿಮಾಗಳಿಗೆ ನಟಿ ಓಕೆ ಎಂದಿದ್ದಾರೆ. ಬರೋಬ್ಬರಿ ಅರ್ಧ ಡಜನ್ ಸಿನಿಮಾ ಅನುಷ್ಕಾ ಕೈಯಲ್ಲಿವೆ.
ಘಾಟಿ’ ಸಿನಿಮಾ, ಮತ್ತೊಂದು ಮಲಯಾಳಂನ ‘ಕಥನಾರ್’ ಚಿತ್ರದ ರಿಲೀಸ್ಗೆ ಸಜ್ಜಾಗಿದೆ. ತೆಲುಗಿನಲ್ಲಿ 3 ಸಿನಿಮಾ, ತಮಿಳಿನಲ್ಲಿ 2 ಸಿನಿಮಾ, ಮಲಯಾಳಂನ 2 ಚಿತ್ರಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಪೈಕಿ ಒಂದು ಪ್ರಾಜೆಕ್ಟ್ನಲ್ಲಿ ಪ್ರಭಾಸ್ ಜೊತೆ ಮತ್ತೊಮ್ಮೆ ಸ್ವೀಟಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಸಿನಿಮಾಗೆ ಪ್ರತಿಷ್ಠಿತ ಸಂಸ್ಥೆಯೊಂದು ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ ಎಂದು ಹೇಳಲಾಗ್ತಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆಯಂತೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸುವವರೆಗೂ ಕಾದುನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






