ಪಡ್ಡೆ ಹುಡುಗರ ನಶೆ ಹೆಚ್ಚಿಸಲು ತಮನ್ನಾ ರೆಡಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಲ್ಕಿ ಬ್ಯೂಟಿ ರೊಮ್ಯಾನ್ಸ್!

ಎಪ್ರಿಲ್ 27, 2025 - 18:01
ಎಪ್ರಿಲ್ 26, 2025 - 12:07
 0  9
ಪಡ್ಡೆ ಹುಡುಗರ ನಶೆ ಹೆಚ್ಚಿಸಲು ತಮನ್ನಾ ರೆಡಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಲ್ಕಿ ಬ್ಯೂಟಿ ರೊಮ್ಯಾನ್ಸ್!

ಸೌತ್ ಸಿನಿಮಾ ಪ್ರೇಕ್ಷಕರಿಗೆ ನಟಿ ತಮನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಪ್ರಸ್ತುತ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖ ನಟಿ. 100% ಲವ್ ಸಿನಿಮಾ ಮಾಡಿದ ತಮನ್ನಾ ಯುವಕರ ಕ್ರಶ್ ಆದರು. ಮಿಲ್ಕಿ ಬ್ಯೂಟಿಯ ಸೌಂದರ್ಯಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಒಂದೆಡೆ ಸಿನಿಮಾದಲ್ಲಿ ನಟಿಸುತ್ತಿರುವ ತಮನ್ನಾ ಮತ್ತೊಂದೆಡೆ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ.

ಇದೀಗ ಬಾಲಿವುಡ್‌ನಲ್ಲಿ ನಟಿಗೆ ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಲವರ್ ಬಾಯ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಲ್ಕಿ ಬ್ಯೂಟಿ ರೊಮ್ಯಾನ್ಸ್ ಮಾಡಲಿದ್ದಾರೆ. ಪೌರಾಣಿಕ ಕುರಿತಾದ ‘ವ್ವಾನ್’ ಚಿತ್ರಕ್ಕಾಗಿ ಏಕ್ತಾ ಕಪೂರ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ದೀಪಕ್ ಮಿಶ್ರಾ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ತಮನ್ನಾರನ್ನು ಆಯ್ಕೆ ಮಾಡಲಾಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.

ಸಿದ್ಧಾರ್ಥ್ ಜೊತೆ ತಮನ್ನಾ ಈ ಹೊಸ ಜೋಡಿಯನ್ನು ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಈಗಾಗಲೇ ನಟಿಯೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ತಮನ್ನಾನೇ ನಾಯಕಿನಾ? ಎಂಬುದನ್ನು ಚಿತ್ರತಂಡ ತಿಳಿಸಬೇಕಿದೆ. ಅಂದಹಾಗೆ, ತಮನ್ನಾ ಭಾಟಿಯಾಗೆ ಬಾಲಿವುಡ್‌ನಲ್ಲಿ ಮಾತ್ರವಲ್ಲ, ತೆಲುಗು, ತಮಿಳಿನಲ್ಲೂ ಭಾರೀ ಬೇಡಿಕೆಯಿದೆ. ನಾಯಕಿಯಾಗುವುದರ ಜೊತೆಗೆ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡೋದ್ದಕ್ಕೂ ಅವರಿಗೆ ಡಿಮ್ಯಾಂಡ್ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow