ಹಿಮಾಚಲದಲ್ಲಿ ವಿಶಿಷ್ಟ ಸಂಪ್ರದಾಯ: ಇಬ್ಬರು ಸಹೋದರರಿಗೆ ಒಬ್ಬಳೇ ಪತ್ನಿ!

ಜುಲೈ 22, 2025 - 21:01
ಜುಲೈ 20, 2025 - 14:01
 0  13
ಹಿಮಾಚಲದಲ್ಲಿ  ವಿಶಿಷ್ಟ ಸಂಪ್ರದಾಯ: ಇಬ್ಬರು ಸಹೋದರರಿಗೆ ಒಬ್ಬಳೇ ಪತ್ನಿ!

ಶಿಮ್ಲಾ: ಹಿಮಾಚಲ ಪ್ರದೇಶದ ಶಿಲೈ ತಾಲೂಕಿನ ಹಟ್ಟಿ ಬುಡಕಟ್ಟಿನಲ್ಲಿ ಅಪರೂಪದ ವಿವಾಹ ನಡೆಯಿದ್ದು, ಒಂದೇ ಯುವತಿಯನ್ನು ಇಬ್ಬರು ಸಹೋದರರು ಮದುವೆಯಾಗಿರುವ ಘಟನೆ ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನಸೆಳೆದಿದೆ. ವಧು ಸುನೀತಾ ಚೌಹಾಣ್, ಕುನ್ಹತ್ ಗ್ರಾಮದವರಾಗಿದ್ದು, ವರುಗಳು ಪ್ರದೀಪ್ ನೇಗಿ ಮತ್ತು ಅವರ ಸಹೋದರ ಕಪಿಲ್ ನೇಗಿ. ಇವರ ವಿವಾಹ ಸಮಾರಂಭಕ್ಕೆ ನೂರಾರು ಗ್ರಾಮಸ್ಥರು ಸಾಕ್ಷಿಯಾಗಿದ್ದು, ಸಂಪ್ರದಾಯದಂತೆ ವಿವಾಹ ನೆರವೇರಿತು.

ವಿವಾಹ ಸಮಾರಂಭದ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ. ಕುನ್ಹತ್ ಗ್ರಾಮದ ವಧು ಸುನೀತಾ ಬಗ್ಗೆ ಮಾತನಾಡಿ, ಸಂಪ್ರದಾಯದ ಬಗ್ಗೆ ನನಗೆ ಅರಿವಿತ್ತು. ಯಾವುದೇ ಒತ್ತಡವಿಲ್ಲದೆ ನಾನು ಮದುವೆಗೆ ಒಪ್ಪಿಕೊಂಡಿದ್ದೇನೆ.

ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಾವು ಸಂಪ್ರದಾಯವನ್ನು ಒಪ್ಪಿಕೊಂಡಿದ್ದೇವೆ. ನಮಗೆ ಬಗ್ಗೆ ಹೆಮ್ಮೆಯಿದೆ ಎಂದು ಪ್ರದೀಪ್ ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಇಂತಹ ಸಂಪ್ರದಾಯ ಇದೆ. ಟ್ರಾನ್ಸ್-ಗಿರಿಯ ಬಧಾನಾ ಗ್ರಾಮದಲ್ಲಿ ಕಳೆದ 6 ವರ್ಷಗಳಲ್ಲಿ ಇಂತಹ ಐದು ಮದುವೆಗಳು ನಡೆದಿವೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow