ಪದವಿದಾರರಿಗೆ ಸುವರ್ಣಾವಕಾಶ: ಗುವಾಹಟಿ ಹೈಕೋರ್ಟ್’ನಲ್ಲಿ 367 ಹುದ್ದೆಗಳ ನೇಮಕಾತಿ

ಸರ್ಕಾರಿ ಉದ್ಯೋಗದ ಕನಸು ಹೊತ್ತಿರುವ ಯುವಕರಿಗೆ ಸಂತಸದ ಸುದ್ದಿ. ಗುವಾಹಟಿ ಹೈಕೋರ್ಟ್ 367 ಹುದ್ದೆಗಳ ನೇಮಕಾತಿಗಾಗಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 15ರಿಂದ ಆರಂಭವಾಗಿದೆ.
ಯಾರಾರು ಅರ್ಜಿ ಸಲ್ಲಿಸಬಹುದು?
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ್ದಿರಬೇಕು. ಜೊತೆಗೆ, ಕಂಪ್ಯೂಟರ್‌ನ ಮೂಲಭೂತ ಜ್ಞಾನ ಇರುವದು ಅಗತ್ಯವಾಗಿದೆ, ಏಕೆಂದರೆ ಆಯ್ಕೆ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಪರೀಕ್ಷೆ ಕೂಡ ಒಳಗೊಂಡಿರುತ್ತದೆ.
ವಯೋಮಿತಿ
-
ಕನಿಷ್ಠ ವಯಸ್ಸು: 18 ವರ್ಷ
-
ಗರಿಷ್ಠ ವಯಸ್ಸು: 40 ವರ್ಷ
ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯಲಿದೆ:
-
ಲಿಖಿತ ಪರೀಕ್ಷೆ
-
ಕಂಪ್ಯೂಟರ್ ಪರೀಕ್ಷೆ
-
ವೈವಾ (ಸಂದರ್ಶನ)
ಅರ್ಜಿ ಶುಲ್ಕ
-
ಸಾಮಾನ್ಯ / ಓಬಿಸಿ ಅಭ್ಯರ್ಥಿಗಳಿಗೆ: ₹500
-
ಎಸ್‌ಸಿ / ಎಸ್‌ಟಿ / ದಿವ್ಯಾಂಗ ಅಭ್ಯರ್ಥಿಗಳಿಗೆ: ₹250
ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.
ಸಂಬಳ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹14,000 ರಿಂದ ₹70,000 ದವರೆಗೆ ವೇತನ ನೀಡಲಾಗುತ್ತದೆ. ಜೊತೆಗೆ, ಸರ್ಕಾರದ ನಿಯಮಗಳ ಪ್ರಕಾರ ವಿವಿಧ ಭತ್ಯೆಗಳನ್ನು ಕೂಡ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
-
ಅಧಿಕೃತ ವೆಬ್‌ಸೈಟ್ ghconline.gov.in ಗೆ ಭೇಟಿ ನೀಡಿ
-
ಮುಖಪುಟದಲ್ಲಿ "Recruitment" ವಿಭಾಗವನ್ನು ಕ್ಲಿಕ್ ಮಾಡಿ
-
"Recruitment Notification 6/2024" ಆಯ್ಕೆ ಮಾಡಿ
-
"Apply Online" ಬಟನ್ ಕ್ಲಿಕ್ ಮಾಡಿ
-
ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
-
ಅರ್ಜಿ ಶುಲ್ಕ ಪಾವತಿಸಿ
-
ಅರ್ಜಿ ನಮೂನೆಯ ಪ್ರಿಂಟ್ ಕಾಪಿಯನ್ನು ಭದ್ರವಾಗಿಟ್ಟುಕೊಳ್ಳಿ
ನಿಮ್ಮ ಪ್ರತಿಕ್ರಿಯೆ ಏನು?






