ಪುಷ್ಪ 2 ಚಿತ್ರಕ್ಕೆ 200ಕ್ಕಿಂತ ಜಾಸ್ತಿ ದರ ಇಟ್ಟರೆ ಪರಿಣಾಮ ನೆಟ್ಟಗಿರಲ್ಲ: ಕನ್ನಡ ಫಿಲ್ಮ್ ಛೇಂಬರ್ ಎಚ್ಚರಿಕೆ!

ಅಕ್ಟೋಬರ್ 30, 2024 - 21:00
 0  23
ಪುಷ್ಪ 2 ಚಿತ್ರಕ್ಕೆ 200ಕ್ಕಿಂತ ಜಾಸ್ತಿ ದರ ಇಟ್ಟರೆ ಪರಿಣಾಮ ನೆಟ್ಟಗಿರಲ್ಲ: ಕನ್ನಡ ಫಿಲ್ಮ್ ಛೇಂಬರ್ ಎಚ್ಚರಿಕೆ!

ಕರ್ನಾಟಕದಲ್ಲಿ ಪುಷ್ಪ 2 ಚಿತ್ರಕ್ಕೆ 200ಕ್ಕಿಂತ ಜಾಸ್ತಿ ದರ ಇಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಕನ್ನಡ ಫಿಲ್ಮ್ ಛೇಂಬರ್ ಎಚ್ಚರಿಕೆ ಕೊಟ್ಟಿದೆ  ಇತ್ತೀಚೆಗೆ ‘ಪುಷ್ಪ 2’ ಈವೆಂಟ್​ನಲ್ಲಿ ಕರ್ನಾಟಕ ಹಂಚಿಕೆದಾರ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿದ್ದರು. ತೆಲುಗು ಮೂಲದ ಇವರು ‘ಪುಷ್ಪ 2’ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಬಿಸ್ನೆಸ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದರು. ಪರಭಾಷೆಯವರು ಸುಲಭದಲ್ಲಿ ಈ ರೀತಿ ಬಿಸ್ನೆಸ್ ಮಾಡಿಕೊಂಡು ಹೋಗುತ್ತಿರುವ ವಿಚಾರವನ್ನು, ಹಾಗೂ ಟಿಕೆಟ್​ ದರಕ್ಕೆ ಕಡಿವಾಣ ಇಲ್ಲದನ್ನು ಕನ್ನಡ ಚಲಚಿತ್ರ ವಾಣಿಜ್ಯ ಮಂಡಳಿ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಏಕರೂಪ ಟಿಕೆಟ್ ದರದ ಕೂಗು ಕೂಡ ಎದ್ದಿದೆ.

ಈ ಬಗ್ಗೆ ಮಾತನಾಡಿರುವ ಸಾರಾ ಗೋವಿಂದು ಅವರು, ‘ಮಲ್ಟಿಪ್ಲೆಕ್ಸ್​ನಲ್ಲಿ ರಜಿನಿಕಾಂತ್ ಚಿತ್ರಕ್ಕೆ 6 ಸ್ಕ್ರೀನ್ ಕೊಟ್ಟರೆ ಕನ್ನಡ ಸಿನಿಮಾಗೆ 2 ಸ್ಕ್ರೀನ್ ಕೊಡಲಾಗಿತ್ತು. ಟಿಕೆಟ್ ಬೆಲೆ 1500 ರೂಪಾಯಿ ನಿಗದಿ ಮಾಡಲಾಗಿತ್ತು. ಇದರಿಂದ ನಮ್ಮ ಬೇರೆ ಭಾಷೆ ಅವರು ಇಲ್ಲಿಂದ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಸಿಎಂ ಬಳಿ ಮಾತನಾಡಿದಾಗ ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಮಲ್ಟಿಪ್ಲೆಕ್ಸ್ ಅವರು ಈ ಆದಶಕ್ಕೆ ತಡೆ ತಂದಿದ್ದರು’ ಎಂದಿದ್ದಾರೆ.

ವಿತರಕರಿಗೆ ಈಗೇ ಹೇಳ್ತೀವಿ. ಬೇರೆ ಭಾಷೆ ಸಿನಿಮಾಗೆ ಹೆಚ್ಚು ದುಡ್ಡು ಕೊಟ್ಟು ತರಬೇಡಿ. ಏಕೆಂದರೆ ಟಿಕೆಟ್ ದರ 200 ರೂಪಾಯಿ ಆಗುತ್ತದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ 180, 150 ಟಿಕೆಟ್ ದರ ಇದ್ದರೆ ಇಲ್ಲಿ 1200 ರೂಪಾಯಿ ಇದೆ. ಪುಷ್ಪ 2 ಚಿತ್ರಕ್ಕೆ 200 ರೂಪಾಯಿಗಿಂತ ಜಾಸ್ತಿ ದರ ಇಟ್ಟರೆ ಪರಿಣಾಮ ನೆಟ್ಟಗೆ ಇರಲ್ಲ. ಥಿಯೇಟರ್​ಗೆ ಮುತ್ತಿಗೆ ಹಾಕೋದು ಫಿಕ್ಸ್’ ಎಂದು ಸಾರಾ ಗೋವಿಂದು ಅವರು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow