ಬಕೆಟ್ ಎಸೆದು ಬಾಯಿಗೆ ಬಂದಂತೆ ಸಿಟಿ ಹುಡುಗಿಯರಿಗೆ ಬೈದ ಅಕುಲ್ ಬಾಲಾಜಿ!
ಕನ್ನಡಿಗರ ನೆಚ್ಚಿನ ವಾಹಿನಿ ಝೀ ಕನ್ನಡ ಜನರನ್ನು ತನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಮನರಂಜಿಸುತ್ತ ಬಂದಿದೆ. ಇದೀಗ ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಿರುವ ‘ಹಳ್ಳಿ ಪವರ್’ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ.
ಕಾರ್ಯಕ್ರಮವನ್ನು ನಿರೂಪಿಸುತ್ತಿರುವ ಅಕುಲ್ ಬಾಲಾಜಿ ತಮ್ಮ ಖಡಕ್ ಶೈಲಿಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಳ್ಳಿ ಸೇರಿದ ಯುವತಿಯರಿಗೆ ಮೊದಲ ದಿನವೇ ಹಾಲು ಕರೆಯುವ ಟಾಸ್ಕ್ ನೀಡಲಾಗಿದ್ದು, ಅದರ ಅಭ್ಯಾಸಕ್ಕೂ ಅವಕಾಶ ಕಲ್ಪಿಸಲಾಗಿತ್ತು.
ಮಂಗಳೂರಿನ ಸ್ನೇಹಾ ಶೆಟ್ಟಿ ಅವರು ಎಷ್ಟೇ ಪ್ರಯತ್ನ ಮಾಡಿದರೂ ಒಂದೇ ಒಂದು ತೊಟ್ಟು ಹಾಲು ಕರೆಯೋಕೆ ಸಾಧ್ಯ ಆಗಲೇ ಇಲ್ಲ. ‘ಹಾಲು ಬರ್ತಾ ಇಲ್ಲ. ಈ ಎಮ್ಮೆಯಲ್ಲಿ ಹಾಲೇ ಇಲ್ಲ’ ಎಂದು ಹೇಳಿದರು. ಪ್ರಯತ್ನ ಹಾಕೋದು ಬಿಟ್ಟು ಅವರು ಕೈ ಚೆಲ್ಲಿದರು. ಆಗ ಎಮ್ಮೆಯ ಮಾಲೀಕರು ಬಂದು ಹಾಲು ಕರೆದು ತೋರಿಸಿದರು. ಆಗ ಸ್ನೇಹಾಗೆ ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ.
‘ಸ್ನೇಹಾ ಅವರೇ ಎಷ್ಟು ಹಾಲು ಕರೆದ್ರಿ’ ಎಂದು ಬಕೆಟ್ ನೋಡಿ ನೆಲಕ್ಕೆ ಎಸೆದೇ ಬಿಟ್ಟರು. ಆ ಬಳಿಕ ಸ್ನೇಹಾಗೆ ಏರು ಧ್ವನಿಯಲ್ಲಿ ಬೈದರು. ಇದರಿಂದ ಸ್ನೇಹಾಗೆ ಕಣ್ಣಲ್ಲಿ ನಿರೇ ಬಂದು ಬಿಟ್ಟಿತು. ಆದರೆ, ಅವರ ಪಾರ್ಟ್ನರ್ ಮೋನಿಷಾ 400 ಎಂಎಲ್ ಹಾಲು ಕರೆದಿದ್ದರಿಂದ ಸ್ನೇಹಾಗೆ ಗೆಲುವು ಸಿಕ್ಕಿತು. ಮುಂದಿನ ದಿನಗಳಲ್ಲಿ ಅಕುಲ್ ಬಾಲಾಜಿ ಅವರು ಮತ್ತಷ್ಟು ಉಗ್ರ ಸ್ವರೂಪ ತೋರಿಸೋ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?