ದೇಶದ ಧ್ವಜ ಸುಟ್ಟು ಹಾಕಿದ್ರೆ 1 ವರ್ಷ ಜೈಲು, ತಕ್ಷಣವೇ ಆರೋಪಿ ಅರೆಸ್ಟ್: ಅಮೆರಿಕ ಅಧ್ಯಕ್ಷ ಖಡಕ್ ಆದೇಶ
ವಾಷಿಂಗ್ಟನ್: ಧ್ವಜ ಅಪವಿತ್ರಗೊಳಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಆದೇಶ ಹೊರಡಿಸಿದ್ದಾರೆ. ಅಮೆರಿಕ ರಾಷ್ಟ್ರಧ್ವಜವನ್ನು ಸುಟ್ಟು ಹಾಕಿದರೆ, ಅಂತಹವರನ್ನು ತಕ್ಷಣವೇ ಬಂಧಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ICE, ಗಡಿ ಗಸ್ತು, ಲಾ ಎನ್‌ಫೋರ್ಸ್‌ಮೆಂಟ್ ಮತ್ತು ಎಲ್ಲಾ US ಮಿಲಿಟರಿ ಎಲ್ಲರೂ ಗಮನಿಸಿ.. ಅಮೆರಿಕನ್ ಧ್ವಜವನ್ನು ಸುಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಧ್ವಜ ಅಪವಿತ್ರಗೊಳಿಸುವವರನ್ನು ಶಿಕ್ಷಿಸಲು ಟ್ರಂಪ್ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು. ಈಗ ತಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ತೀಕ್ಷ್ಣಗೊಳಿಸಲು ಟ್ರಂಪ್ ಮುಂದಾಗಿದ್ದಾರೆ ಎನ್ನಲಾಗಿದೆ.
ನಮ್ಮ ದೇಶದ ಶ್ರೇಷ್ಠತೆಯ ವಿಶೇಷ ಸಂಕೇತವಾದ ಅಮೆರಿಕನ್ ಧ್ವಜವನ್ನು ಅಮೆರಿಕನ್ನರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಹಿಂಸಾಚಾರ ಮತ್ತು ಗಲಭೆಗಳನ್ನು ಪ್ರಚೋದಿಸಲು ಒಂದು ಸಾಧನವಾಗಿ ಬಳಸಲು ಅಧ್ಯಕ್ಷ ಟ್ರಂಪ್ ಅನುಮತಿಸುವುದಿಲ್ಲ ಎಂದು ಶ್ವೇತಭವನದ ವಕ್ತಾರ ಅಬಿಗೈಲ್ ಜಾಕ್ಸನ್ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?