ಕೆಪಿಸಿಸಿ ಅಧ್ಯಕ್ಷರಂತೂ ನಮ್ಮನ್ನು ನೋಡೋದೇ ಇಲ್ಲ: ಡಿಸಿಎಂ ವಿರುದ್ಧ ರಾಜು ಕಾಗೆ ಅಸಮಾಧಾನ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಂತೂ ನಮ್ಮನ್ನು ನೋಡೋದೇ ಇಲ್ಲ ಎಂದು ಶಾಸಕ ರಾಜು ಕಾಗೆ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಈ ರೀತಿಯ ಸಮಸ್ಯೆ ಇರಲಿಲ್ಲ, ಈಗ ಯಾಕೆ ಇದೆ ಎಂದು ಗೊತ್ತಿಲ್ಲ, ಎಂದು ಅವರು ಹೇಳಿದ್ದಾರೆ.
ಜೊತೆಗೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಶಾಸಕರನ್ನು ಗಮನಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಂತೂ ನಮ್ಮನ್ನು ನೋಡೋದೇ ಇಲ್ಲ ಎಂದು ರಾಜು ಕಾಗೆ ಆರೋಪಿಸಿದ್ದಾರೆ.
ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ವ್ಯವಸ್ಥೆ ಸುಧಾರಣೆ ಆಗಬೇಕು, ಆಡಳಿತ ಚುರುಕಾಗಬೇಕು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕು. ಈಗ ಸುಧಾರಣೆ ಆಗದಿದ್ದರೆ ಮತ್ತೆ ಯಾವಾಗ ಆಗುವುದು?" ಎಂದು ರಾಜು ಕಾಗೆ ಪ್ರಶ್ನಿಸಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಒಂದು ವರ್ಷದ ಹಿಂದಿನ ರಸ್ತೆ ಕಾಮಗಾರಿಗಳ ಸ್ಥಿತಿಯೇ ಇನ್ನೂ ಹಾಗೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






