ಮೂಲಂಗಿ ಆರೋಗ್ಯಕ್ಕೆ ಒಳ್ಳೇದು, ಆದ್ರೆ ಈ ಕಾಯಿಲೆ ಇರುವವರು ಮಾತ್ರ ತಿನ್ನಬಾರದು!

ಚಳಿಗಾಲದ ಆರಂಭದಲ್ಲಿ, ಮಾರುಕಟ್ಟೆಯಲ್ಲಿ ಹೆಚ್ಚು ಗೋಚರಿಸುವ ಒಂದು ತರಕಾರಿ ಮೂಲಂಗಿ. ಸಲಾಡ್ ಹೊರತುಪಡಿಸಿ, ಇದನ್ನು ತರಕಾರಿಯಾಗಿಯೂ ಸೇವಿಸಲಾಗುತ್ತದೆ. ಮೂಲಂಗಿಯು ವಿಟಮಿನ್-ಎ, ಬಿ, ಸಿ, ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ಖನಿಜಗಳಿಂದ ಸಮೃದ್ಧವಾಗಿದೆ.
ಇದು ಜೀರ್ಣಕ್ರಿಯೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ ಮತ್ತು ಚಳಿಗಾಲದಲ್ಲಿ ಜನರು ಇದನ್ನು ಖಂಡಿತವಾಗಿ ತಿನ್ನುತ್ತಾರೆ. ಹಾಗೆಯೇ ಮೂಲಂಗಿಯಿಂದ ಮೂಲವ್ಯಾಧಿಯನ್ನೂ ಕೂಡ ಗುಣಪಡಿಸಬಹುದು. ಮೂಲಂಗಿ ರುಚಿಕರ ಮತ್ತು ಪೌಷ್ಟಿಕಾಂಶದಿಂದ ಕೂಡಿದೆ, ಆದರೆ ಸಕ್ಕರೆ ಕಾಯಿಲೆ ಇದ್ದವರು ಮೂಲಂಗಿ ತಿನ್ನಬಾರದು. ಯಾಕಂದ್ರೆ, ಮಧುಮೇಹ ಇದ್ದವರು ಮೂಲಂಗಿ ಜಾಸ್ತಿ ತಿಂದ್ರೆ, ಸಕ್ಕರೆ ಮಟ್ಟ ಕಡಿಮೆಯಾಗಬಹುದು.
ಐರನ್ ಜಾಸ್ತಿ ಇದ್ದವರು ಮೂಲಂಗಿ ತಿನ್ನಬಾರದು. ಇಲ್ಲಾಂದ್ರೆ ಭೇದಿ, ಹೊಟ್ಟೆನೋವು, ವಾಂತಿ, ತಲೆಸುತ್ತು, ಸಕ್ಕರೆ ಮಟ್ಟ ಕಡಿಮೆಯಾಗುವುದು, ಲಿವರ್ ಸಮಸ್ಯೆ, ರಕ್ತಸ್ರಾವ ಆಗಬಹುದು.
ಮೂಲಂಗಿ ಜಾಸ್ತಿ ತಿಂದ್ರೆ ರಕ್ತದೊತ್ತಡ ಕಡಿಮೆಯಾಗಬಹುದು. ಈಗಾಗಲೇ ಕಡಿಮೆ ರಕ್ತದೊತ್ತಡ ಇದ್ದವರು ಅಥವಾ ರಕ್ತದೊತ್ತಡದ ಔಷಧಿ ತಿನ್ನುವವರು ಮೂಲಂಗಿ ತಿನ್ನಬಾರದು.
ನೀರಿನ ಕೊರತೆ ಇದ್ದವರು ಅಥವಾ ಮೂಲಂಗಿ ಜಾಸ್ತಿ ತಿಂದ್ರೆ ನೀರಿನ ಕೊರತೆ ಆಗಬಹುದು. ಮೂಲಂಗಿ ತಿಂದ್ರೆ ಆಗಾಗ್ಗೆ ಮೂತ್ರ ವಿಸರ್ಜನೆ ಆಗುತ್ತೆ. ಹಾಗಾಗಿ ನೀರಿನ ಕೊರತೆ ಆಗಬಹುದು. ಕಡಿಮೆ ಪ್ರಮಾಣದಲ್ಲಿ ತಿನ್ನಬಹುದು.
ಥೈರಾಯ್ಡ್ ಇದ್ದವರು ಮೂಲಂಗಿ ತಿಂದ್ರೆ ತೊಂದರೆಯಾಗಬಹುದು. ಮೂಲಂಗಿಯಲ್ಲಿ ಗಾಯಿಟ್ರೋಜನ್ ಇದೆ. ಇದು ಥೈರಾಯ್ಡ್ ಗ್ರಂಥಿಗೆ ತೊಂದರೆ ಕೊಡಬಹುದು.
ಐರನ್ ಜಾಸ್ತಿ ಇದ್ದವರು ಮೂಲಂಗಿ ತಿನ್ನಬಾರದು. ಇಲ್ಲಾಂದ್ರೆ ಭೇದಿ, ಹೊಟ್ಟೆನೋವು, ವಾಂತಿ, ತಲೆಸುತ್ತು, ಸಕ್ಕರೆ ಮಟ್ಟ ಕಡಿಮೆಯಾಗುವುದು, ಲಿವರ್ ಸಮಸ್ಯೆ, ರಕ್ತಸ್ರಾವ ಆಗಬಹುದು.
ನಿಮ್ಮ ಪ್ರತಿಕ್ರಿಯೆ ಏನು?






