ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಐದನೇ ರೈಲಿನ ಟೆಸ್ಟಿಂಗ್ ಶೀಘ್ರದಲ್ಲೇ ಆರಂಭ!

ಅಕ್ಟೋಬರ್ 5, 2025 - 10:47
ಅಕ್ಟೋಬರ್ 4, 2025 - 15:40
 0  5
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಐದನೇ ರೈಲಿನ ಟೆಸ್ಟಿಂಗ್ ಶೀಘ್ರದಲ್ಲೇ ಆರಂಭ!

ಬೆಂಗಳೂರು:- ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲ್ಪಟ್ಟಿದ್ದ ಯೆಲ್ಲೋ ಲೈನ್ ಈಗ ಮೆಟ್ರೋ ಮತ್ತೊಮ್ಮೆ ಹೊಸ ಬೆಳವಣಿಗೆ ಕಂಡಿದೆ. 

ಮೊದಲು ಕೇವಲ 3 ರೈಲುಗಳ ಸಂಚಾರವಿತ್ತು. ನಂತರದಲ್ಲಿ ಇನ್ನೊಂದು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಈಗ BMCRL ನ ನಿರ್ಧಾರದಂತೆ 5 ನೇ ರೈಲು ಸಂಚಾರ ಶುರುವಾಗಲಿದೆ. ಆರ್.ವಿ ರೋಡಿಂದ  ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚಾರ ಮಾಡಲು ಕಲ್ಕತ್ತಾದ ಟಿಟಾಗರ್​ನಿಂದ ಐದನೇ ಮೆಟ್ರೋ ರೈಲು ಬಂದಿದ್ದು, ಐದನೇ ರೈಲಿನ ಟೆಸ್ಟಿಂಗ್ ಕಾರ್ಯ ಆರಂಭವಾಗಲಿದೆ. 4 ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಈ ಮಾರ್ಗಕ್ಕೆ ಆಗಸ್ಟ್- 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. BMRCL ಬಳಿ ಯೆಲ್ಲೋ ಲೈನ್ ನಲ್ಲಿ ಸಂಚಾರ ಮಾಡಲು ನಾಲ್ಕು ರೈಲುಗಳಿದ್ದ ಕಾರಣ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿತ್ತು. ಐದನೇ ರೈಲು ಟ್ರ್ಯಾಕ್ ಗಿಳಿಯುತ್ತಿದ್ದಂತೆ ಹದಿನೈದು ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ. 

ಕೋಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್​ನಿಂದ ಹೊಸ ಬೋಗಿಗಳು ಹೊರಟು ಸೆಪ್ಟೆಂಬರ್ 19 ರಂದು ಬೆಂಗಳುರು ತಲುಪಿತ್ತು. ಬೆಂಗಳೂರಿನಲ್ಲಿ ಎಲ್ಲಾ ಬೋಗಿಗಳ ಜೋಡಣೆಯಾದ ಬಳಿಕ 20 ದಿನಗಳ ಪರೀಕ್ಷೆ ನಡೆಯಲಿದೆ ಎಂದು BMRCL ತಿಳಿಸಿತ್ತು. ಇಂದಿನಿಂದ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈಗಳ ಪರೀಕ್ಷೆಗೆ ರೈಲು ಒಳಪಡಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow