ಕೊನೆಗೂ ಬದುಕಿ ಬರಲಿಲ್ಲ ಅಕ್ಷಯ್: 5 ದಿನಗಳ ಹೋರಾಟ ಅಂತ್ಯ -BBMP ಕೊಟ್ಟ ಪರಿಹಾರ ಎಷ್ಟು ಗೊತ್ತಾ..?

ಜೂನ್ 19, 2025 - 16:00
 0  16
ಕೊನೆಗೂ ಬದುಕಿ ಬರಲಿಲ್ಲ ಅಕ್ಷಯ್: 5 ದಿನಗಳ ಹೋರಾಟ ಅಂತ್ಯ -BBMP ಕೊಟ್ಟ ಪರಿಹಾರ ಎಷ್ಟು ಗೊತ್ತಾ..?

ಬೆಂಗಳೂರು: ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷಯ್ ಸಾವನ್ನಪ್ಪಿದ್ದಾನೆ. ಜೂನ್ 15 ಭಾನುವಾರ ಅಕ್ಷಯ್ ತಂದೆ ಶಿವರಾಮ್ರ 62ನೇ ಬರ್ತ್ ಡೇ. ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಹುಟ್ಟು ಹಬ್ಬದ ದಿನ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಟನ್ ತರಲು ಹೋಗಿದ್ದಾನೆ. ಮಟನ್ ತಗೊಂಡು ವಾಪಸ್ ಬರುತ್ತಿದ್ದಾಗ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿದೆ.

ಮರದ ಕೊಂಬೆ ಬಿದ್ದ ಏಟಿಗೆ ಅಕ್ಷಯ್ ರಸ್ತೆಗೆ ಬಿದ್ದಿದ್ದಾನೆ. ಪ್ರಜ್ಞೆಯನ್ನ ಕಳೆದುಕೊಂಡಿದ್ದಾನೆ. ಪ್ರಜ್ಜೆ ತಪ್ಪಿ ರಸ್ತೆಗೆ ಬಿದ್ದ ಅಕ್ಷಯ್ನನ್ನ ಕೂಡಲೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ದಾಖಲಿಸಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತಾದರೂ ಬ್ರೈನ್ ಡೆಡ್ ಆಗಿತ್ತು. ಆದ್ರೆ, ಇಂದು ಮಧ್ಯಾಹ್ನ 1.15ಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಅಕ್ಷಯ್ ಮೂಲತಃ ಬನಶಂಕರಿಯ ಕತ್ರಿಗುಪ್ಪೆಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿವೊಂದರಲ್ಲಿ ಹೆಚ್.ಆರ್. ಕೆಲಸ ಮಾಡುತ್ತಿದ್ದ. ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ. ತಾನೇ ದುಡಿದು ಇಡೀ ಕುಟುಂವನ್ನ ಸಾಕುತ್ತಿದ್ದ. ಆದ್ರೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣಿರು ಹಾಕುತ್ತಿದ್ದಾರೆ.

ಇನ್ನೂ ಮೃತ ಅಕ್ಷಯ್ ಕುಟುಂಬಕ್ಕೆ ಬಿಬಿಎಂಪಿ ಚಿಕಿತ್ಸಾ ವೆಚ್ಚದ ಹೊರತುಪಡಿಸಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಇನ್ನು ಅಕ್ಷಯ್ ಸಾವನ್ನಪ್ಪುತ್ತಿದ್ದಂತೆಯೇ ಕುಟುಂಬಸ್ಥರು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಯನಗರದ ಅಪೋಲೋ ಆಸ್ಪತ್ರೆ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.  

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow