ಶಿವಣ್ಣನ ಎನರ್ಜಿಗೆ ವೀಕ್ಷಕರು ಫಿದಾ.. ಸರಿಗಮಪ ವೇದಿಕೆ ಧೂಳೆಬ್ಬಿಸಿದ ಕರುನಾಡ ಚಕ್ರವರ್ತಿ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ದಿನ ಕಳೆದಂತೆ ವಯಸ್ಸು ಕಮ್ಮಿಯಾದಂತೆ ಕಾಣ್ತಿದೆ. ಅಬ್ಬಾ.. ಇವರ ಎನರ್ಜಿಗೆ ಯಾರು ಹೋಲಿಕೆ ಇಲ್ಲ ಮರ್ರೆ...
ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಸುಖಾ ಸುಮ್ಮನೆ ಎನರ್ಜಿ ಕಿಂಗ್ ಅಂತ ಹೆಸರು ಕೊಟ್ಟಿಲ್ಲ. ಪವರ್ ಅನ್ನೋದಕ್ಕೆ ನಿಜವಾದ ಎಕ್ಸಾಂಪಲ್ ಕರುನಾಡ ಚಕ್ರವರ್ತಿ. ಎಂತಹದ್ದೇ ಕಷ್ಟ ಬಂದ್ರು ಪುಟಿದೇಳುವ ತಾಕತ್ತಿದೆ ಅನ್ನೋದನ್ನು ಮತ್ತೇ ಮತ್ತೇ ಪ್ರೂವ್ ಮಾಡಿದ್ದಾರೆ.
ಶಿವಣ್ಣ ಅವರು, ಕ್ಯಾನ್ಸರ್ನ ಜಯಿಸಿ, ಕೆಲವೇ ಕೆಲವು ದಿನಗಳಲ್ಲಿ ಕಮ್ಬ್ಯಾಕ್ ಮಾಡಿರೋದು ನಿಜಕ್ಕೂ ಸ್ಫೂರ್ತಿದಾಯಕ. ಸದ್ಯ ಸರಿಗಮಪ ವೇದಿಕೆಗೆ ಪವರ್ ಪ್ಯಾಕ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೌದು, ಡಿಕೆಡಿ ವೇದಿಕೆಯಿಂದ ತುಂಬಿದ ಕಣ್ಣುಗಳಲ್ಲಿ ಶಿವಣ್ಣನ ಬಿಳ್ಕೋಡಲಾಗಿತ್ತು. ಚಿಕಿತ್ಸೆಗೆ ತೆರಳುವಾಗ ಎಲ್ಲರ ಹೃದಯ ಭಾರವಾಗಿತ್ತು. ಇಡೀ ರಾಜ್ಯ ಅದೇ ನಗು, ಅದೇ ಎನಿರ್ಜಿ ಜೊತೆಗೆ ಶಿವಣ್ಣ ಮರಳಿ ಬರಲಿ ಎಂದು ಹಾರೈಸಿದ್ರು. ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಫಲ ಕೊಟ್ಟಿದೆ. ಇದೀಗ ಮತ್ತೆ ಧೂಳ್ ಎಬ್ಬಿಸೋಕೆ ಎನರ್ಜಿಗೆ ಮರಳಿದ್ದಾರೆ.
ಈ ವಾರ ಸರಿಗಮಪ ವೇದಿಕೆಯಲ್ಲಿ ಶಿವಣ್ಣನ ಸಂಭ್ರಮಿಸಲಾಗ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






