Rohit Sharma: ಹಳೆಯ ಫಾರ್ಮ್ ಗೆ ಮರಳಿದ ರೋಹಿತ್: ವಿಶೇಷ ದಾಖಲೆ ಬರೆದ ಹಿಟ್ ಮ್ಯಾನ್!

ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು, ಐಪಿಎಲ್ ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುತ್ತಿರುವ ಹಿಟ್ ಮ್ಯಾನ್ ತಂಡಕ್ಕೆ ಇಂಪ್ಯಾಕ್ಟ್ ಆಗುತ್ತಿಲ್ಲ. ಆದರೆ, ರೋಹಿತ್ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಕೊಂಚ ಲಯಕಂಡುಕೊಂಡಂತೆ ಕಾಣಿಸಿದರು. ಒಂದಿಷ್ಟು ಅದ್ಭುತ ಹೊಡೆತಗಳನ್ನು ಸಿಡಿಸಿ ನಂತರ ಪೆವಿಲಿಯನ್ ಸೇರಿದರು. ಈ ಪಂದ್ಯದಲ್ಲಿ ಅವರು ಬೃಹತ್ ದಾಖಲೆಯನ್ನು ಕೂಡ ಸ್ಥಾಪಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಶೈಲಿಗೆ ಮರಳಿದರು ಎನ್ನಬಹುದು. ಪುಲ್ ಶಾಟ್ ಮೂಲಕ ಎರಡು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದರು. ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮ್ಮಿನ್ಸ್ ಓವರ್‌ಗಳಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. ರೋಹಿತ್ ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 26 ರನ್ ಚಚ್ಚಿದರು. ಈ ಸಿಕ್ಸರ್‌ಗಳೊಂದಿಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದಾರೆ.
ರೋಹಿತ್ ಶರ್ಮಾ ಈಗ ವಾಂಖೆಡೆ ಕ್ರೀಡಾಂಗಣದಲ್ಲಿ ಒಟ್ಟು 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ವಾಂಖೆಡೆಯಲ್ಲಿ 100 ಐಪಿಎಲ್ ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ವಾಂಖೆಡೆ ಕ್ರೀಡಾಂಗಣದಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿಲ್ಲ. ಈ ಮೂಲಕ ರೋಹಿತ್ ಶರ್ಮಾ ಫಾರ್ಮ್ಗೆ ಮರಳುವ ಸಣ್ಣ ಸೂಚನೆ ಕೊಟ್ಟಿದ್ದಾರೆ. ಹಿಟ್‌ಮ್ಯಾನ್ ಒಂದೇ ಸ್ಥಳದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






