Rocky Bhai Yash @ Dharmasthala ; ಧರ್ಮಸ್ಥಳದಲ್ಲಿ ಯಶ್, ದರ್ಶನ .!

ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ಇಂದು ರಾಕಿಂಗ್ ಸ್ಟಾರ್ ಯಶ್ (Rocking Star, Actor Yash) ಭೇಟಿ ನೀಡಿದರು. ಹೊಸ ಚಿತ್ರ ʼಟಾಕ್ಸಿಕ್ʼನ (Toxic) ಶೂಟಿಂಗ್ ಇನ್ನು ಮೇಲೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರ ದರ್ಶನ ಮಾಡಿದ್ದಾರೆ ಎನ್ನಲಾಗಿದೆ.
ಮಳೆಯಿಂದ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತಾದಿಗಳ ಜನಸಂದಣಿ ಕಡಿಮೆಯಾಗಿರುವ ಸಮಯದಲ್ಲಿ ರಾಕಿಭಾಯ್ ಟೆಂಪಲ್ ರನ್ (Temple Run) ನಡೆಸಿದ್ದಾರೆ. ಇಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ದರ್ಶನ ಮಾಡಿದ್ದು, ನಂತರ ಬೆಳ್ತಂಗಡಿಯ ಸೂರ್ಯ ದೇವಸ್ಥಾನಕ್ಕೆ ವಿಸಿಟ್ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.
ʼಟಾಕ್ಸಿಕ್ʼ ಹೊಸಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗುವ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದಿದ್ದಾರೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ (Dr Veerendra Heggade) ಅವರನ್ನೂ ಭೇಟಿಯಾಗಿ ಆಶೀರ್ವಾದ ಪಡೆದರು.
ಬ್ಯುರೊ ರಿಪೋರ್ಟ್
ಫೋಕಸ್ ಕರ್ನಾಟಕ.
ನಿಮ್ಮ ಪ್ರತಿಕ್ರಿಯೆ ಏನು?






