6 ವಿದೇಶಿ ಆಟಗಾರರಿಗೆ ಆರ್​ಸಿಬಿಯಿಂದ ಗೇಟ್​ಪಾಸ್..!

ಆಗಸ್ಟ್ 7, 2024 - 10:49
 0  24
6 ವಿದೇಶಿ ಆಟಗಾರರಿಗೆ ಆರ್​ಸಿಬಿಯಿಂದ ಗೇಟ್​ಪಾಸ್..!
  • ಗ್ರೀನ್​, ಜಾಕ್ಸ್​ ಅವರನ್ನು ಉಳಿಸಿಕೊಳ್ಳಲಿದೆ ಆರ್​ಸಿಬಿ ಫ್ರಾಂಚೈಸಿ.
  • ಕನ್ನಡಿಗ ಕೆಎಲ್ ರಾಹುಲ್​​ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ತಂಡ.
  • ಬೌಲಿಂಗ್ ವಿಭಾಗದಲ್ಲಿ ಹೊಸ ಸದಸ್ಯರ ಸೇರಿಸಿಕೊಳ್ಳಲು ಲೆಕ್ಕಾಚಾರ.
    ಐಪಿಎಲ್ ಫ್ರಾಂಚೈಸಿಗಳು ಮುಂಬರುವ ಟೂರ್ನಿ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿವೆ. ಡಿಸೆಂಬರ್​ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿವೆ. ಇದರಲ್ಲಿ ನಮ್ಮ ಆರ್​ಸಿಬಿ ಕೂಡ ಹೊರತಾಗಿಲ್ಲ.


ಕಳೆದ ಬಾರಿ ಪ್ಲೇ-ಆಫ್ ಪ್ರವೇಶ ಮಾಡಿದ್ದ ಆರ್​​ಸಿಬಿ, ಈ ಸಲ ಕಪ್ ಹೊಡೆಯುವ ಛಲದಲ್ಲಿದೆ. ಹೀಗಾಗಿ ಬಲಾಢ್ಯ ತಂಡ ಕಟ್ಟುವ ಜವಾಬ್ದಾರಿ ಫ್ರಾಂಚೈಸಿ ಮೇಲಿದೆ. ಇನ್ನು, ಹರಾಜಿಗೂ ಮುನ್ನ ಕೆಲವು ವಿದೇಶಿ ಆಟಗಾರರನ್ನು ಕೈಬಿಡುವ ಲೆಕ್ಕಾಚಾರದಲ್ಲಿದೆ.

https://www.instagram.com/reel/C91x0oOyggZ/

ಪ್ರಮುಖ ಮೂರು ವಿದೇಶಿ ಆಟಗಾರರನ್ನು ಕೈಬಿಡಲಿದೆ. ಅದರಲ್ಲಿ ಪ್ರಮುಖವಾಗಿ ಮ್ಯಾಕ್ಸ್​ವೆಲ್​ ಇದ್ದಾರೆ. 2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್​ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್​ಸಿಬಿ ಮ್ಯಾನೇಜ್ಮೆಂಟ್​​ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow