ಮಹದೇವಪುರದಲ್ಲಿ 1 ಲಕ್ಷ ಮತಗಳ್ಳತನ: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ!

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಕ್ಷೇತ್ರಗಳಲ್ಲಿ ನಕಲಿ ಮತದಾನ ನಡೆದಿದ್ದು, ಮತದಾರರ ಪಟ್ಟಿಗಳಲ್ಲಿ ಭಾರಿ ವಂಚನೆ ನಡೆದಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಬಗ್ಗೆ ಸಾಕ್ಷಿ ಸಮೇತ ವಿವರಗಳನ್ನು ನೀಡಿದರು.
ರಾಹುಲ್ ಗಾಂಧಿಯು ಮಹದೇವಪುರ ಕ್ಷೇತ್ರದಲ್ಲಿ 40,009 ನಕಲಿ ವಿಳಾಸದ ಮತದಾರರು ಇದ್ದಾರೆ ಎಂದು ಆರೋಪಿಸಿ, "ಅನೆಕ ವಿಳಾಸಗಳಲ್ಲಿ ‘ಮನೆ ಸಂಖ್ಯೆ 0’ ಎಂದು ಉಲ್ಲೇಖಿಸಲಾಗಿದೆ. ಒಂದು ಕಟ್ಟಡದ ಒಂದು ಕೋಣೆಯ ವಿಳಾಸದಲ್ಲಿ 46 ಮತದಾರರು ನೋಂದಾಯಿಸಲ್ಪಟ್ಟಿದ್ದಾರೆ. ಆದರೆ ಪರಿಶೀಲನೆ ವೇಳೆ ಅಲ್ಲಿ ಯಾರೂ ವಾಸವಿಲ್ಲ ಎಂದು ಪತ್ತೆಯಾಗಿದೆ" ಎಂದು ವಿವರಿಸಿದರು.
ಅವರ ಅಂಕಿಅಂಶಗಳ ಪ್ರಕಾರ:
- ಸುಮಾರು 40,000 ವಿಳಾಸಗಳು ನಕಲಿ ಎಂದು ಶಂಕಿಸಲಾಗಿದೆ
- 4,000ಕ್ಕೂ ಹೆಚ್ಚು ಮತದಾರರು ಯಾವುದೇ ಫೋಟೋ ಇಲ್ಲದೆ ಪಟ್ಟಿಗೆ ಸೇರಿಸಲಾಗಿದೆ
ಈ ಎಲ್ಲದರ ಹಿಂದೆ ಬಿಜೆಪಿಯೆ ಇದೆ ಎಂದು ಆರೋಪಿಸಿದ ಅವರು, "ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೈಜೋಡಿಸಿ ಮತ ಕದಿಯುತ್ತಿದೆ. ಇದು ಪ್ರಜಾಪ್ರಭುತ್ವದ ಮೇಲೆ ಸಿಡಿದಿರುವ ದೊಡ್ಡ ಅಪಾಯ" ಎಂದು ಆತಂಕ ವ್ಯಕ್ತಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






