‘ಕಾಂತಾರ: ಚಾಪ್ಟರ್ 1’ ಎದುರು ರಿಲೀಸ್ ಆಗಲಿದೆ ಬಿಗ್ ಹೀರೋ ಸಿನಿಮಾ..!
ಧನುಷ್ ಅವರ ‘ಇಡ್ಲಿ ಕಡಾಯಿ’ ಚಿತ್ರವು ಅಕ್ಟೋಬರ್ 1 ರಂದು ಬಿಡುಗಡೆಯಾಗುತ್ತಿದೆ. ಅದೇ ಸಮಯದಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಿಡುಗಡೆಯೂ ಇದೆ. ಈ ಎರಡು ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಸ್ಪರ್ಧೆ ಏರ್ಪಡೋ ಸಾಧ್ಯತೆ ಇದೆ.
ಹೌದು ತಮಿಳು ಚಿತ್ರರಂಗದ ಜನಪ್ರಿಯ ನಟ ಧನುಶ್ ತಮ್ಮ ಹೊಸ ನಿರ್ದೇಶನದ ‘ಇಡ್ಲಿ ಕಡಾಯಿ’ ಸಿನಿಮಾ ಅಕ್ಟೋಬರ್ 1ಕ್ಕೆ ರಿಲೀಸ್ ಮಾಡುವಂತೆ ಘೋಷಿಸಿದ್ದಾರೆ. ಧನುಶ್ ಈ ಚಿತ್ರಕ್ಕೆ ಸ್ವತಃ ನಿರ್ದೇಶನ ಮಾಡಿದ್ದಾರೆ ಮತ್ತು ನಾಯಕಿಯಾಗಿ ದುಶಾರಾ ವಿಜಯನ್ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ಧನುಶ್ ನಿರ್ದೇಶನದ ಮೊದಲ ಸಿನಿಮಾ ‘ರಾಯನ್’ ತೆರೆಗೆ ಬಂದು ಉತ್ತಮ ಪ್ರತಿಕ್ರಿಯೆ ಪಡೆದಿದೆ. ಅದರ ಬೆನ್ನಲ್ಲೇ ‘ಇಡ್ಲಿ ಕಡಾಯಿ’ ಸಿನಿಮಾ ಘೋಷಣೆ ಮಾಡಲಾಗಿದೆ. ಚಿತ್ರ ಪ್ರಚಾರ ಮತ್ತು ನಿರೀಕ್ಷೆ ಎರಡೂ ಗಮನ ಸೆಳೆಯುತ್ತಿದೆ.
ಈ ನಡುವೆ, ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ಕ್ಕೆ ರಿಲೀಸ್ ಆಗಲಿದ್ದು, ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ಸಹ ಗಮನ ಸೆಳೆದಿದೆ. ಈ ಸಂದರ್ಭ, ‘ಇಡ್ಲಿ ಕಡಾಯಿ’ ಚಿತ್ರದ ‘ಕಾಂತಾರ’ ಚಿತ್ರದೊಂದಿಗೆ ಸ್ಪರ್ಧೆ ಎದುರಿಸಬಹುದೇ ಎಂಬ ಪ್ರಶ್ನೆ ಸುದ್ದಿಗಾರರಲ್ಲಿ ಚರ್ಚೆಗೆ ಕಾರಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?