ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರೇಮ್..! ಯಾಕೆ ಗೊತ್ತಾ..?

ಆಗಸ್ಟ್ 20, 2025 - 21:07
 0  13
ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರೇಮ್..! ಯಾಕೆ ಗೊತ್ತಾ..?

ಕನ್ನಡದ ಖ್ಯಾತ ನಿರ್ದೇಶಕ ಪ್ರೇಮ್ ಬಳಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.. ಹೈನುಗಾರಿಕೆಗಾಗಿ ಎಮ್ಮೆ ಖರೀದಿಸಲು ₹4.50 ಲಕ್ಷ ನೀಡಿದರೂ, ಎಮ್ಮೆ ಸಿಗದೇ ಹಣವೂ ಕೈಮುಗಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಮ್ ಅವರ ಮ್ಯಾನೇಜರ್ ದಶಾವರ ಚಂದ್ರು ನೀಡಿದ ದೂರಿನ ಆಧಾರದ ಮೇಲೆ, ಗುಜರಾತ್‌ನ ಗಧಡಾ ಮೂಲದ ವಘೇಲಾ ವನರಾಜ್ ಭಾಯ್ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜುಲೈನಲ್ಲಿ ಮೊದಲು ₹25,000 ಮುಂಗಡವಾಗಿ ನೀಡಿ ಬಳಿಕ ಹಂತ ಹಂತವಾಗಿ ಒಟ್ಟು ₹4.50 ಲಕ್ಷ ಹಣ ವರ್ಗಾವಣೆ ವಾಟ್ಸಾಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿ ಭರವಸೆ ನೀಡಿದ ಆರೋಪಿ ಎಮ್ಮೆಗಳನ್ನು ತಂದುಕೊಡದೇ, ಹಣ ವಾಪಸ್ ಕೊಡದೆ ನಾಪತ್ತೆಯಾಗಿರುವ ಆರೋಪಿ ನೀಡಿದ ವಿಳಾಸದಲ್ಲೂ ವಾಸಿಸದಿರುವುದು ಬಹಿರಂಗವಾಗಿದ್ದು, ಸದ್ಯ, ಆರೋಪಿ ಮೊಬೈಲ್ ಆಫ್ ಮಾಡಿಕೊಂಡಿದ್ದು, ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರಗಳನ್ನು ಶೋಧಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow