India Playing XI: ಬದಲಾವಣೆ ಖಚಿತ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್!

ಆಗಸ್ಟ್ 21, 2025 - 09:14
 0  19
India Playing XI: ಬದಲಾವಣೆ ಖಚಿತ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್!

ಏಷ್ಯಾ ಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟವಾಗಿದೆ. ಆರಂಭಿಕರ ಸಂಖ್ಯೆಯೂ, ಆಲ್‌ರೌಂಡರ್‌ಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಕೋಚ್ ಹಾಗೂ ತಂಡ ನಿರ್ವಹಣೆಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ದೊಡ್ಡ ಸವಾಲಾಗಿದೆ. ಆದರೆ ಮೊದಲ ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ:

ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

  1. ಅಭಿಷೇಕ್ ಶರ್ಮಾ (ಓಪನರ್, ಪಾರ್ಟ್-ಟೈಮ್ ಬೌಲರ್)
  2. ಶುಭ್‌ಮನ್ ಗಿಲ್ (ಓಪನರ್, ಉಪನಾಯಕ)
  3. ತಿಲಕ್ ವರ್ಮಾ
  4. ಸೂರ್ಯಕುಮಾರ್ ಯಾದವ್ (ನಾಯಕ)
  5. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
  6. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್-ಬ್ಯಾಟರ್)
  7. ಶಿವಂ ದುಬೆ (ಆಲ್‌ರೌಂಡರ್)
  8. ಅಕ್ಷರ್ ಪಟೇಲ್ (ಆಲ್‌ರೌಂಡರ್/ಸ್ಪಿನ್ನರ್)
  9. ಜಸ್‌ಪ್ರೀತ್ ಬುಮ್ರಾ (ಫಾಸ್ಟ್ ಬೌಲರ್)
  10. ಅರ್ಷದೀಪ್ ಸಿಂಗ್ (ಫಾಸ್ಟ್ ಬೌಲರ್)
  11. ವರುಣ್ ಚಕ್ರವರ್ತಿ (ಸ್ಪಿನ್ನರ್)

ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿರುವುದು ಸೆಪ್ಟೆಂಬರ್ 10 ರಿಂದ. ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಯುಎಇ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 14 ರಂದು ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ. ಇನ್ನು ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ಒಮಾನ್ ತಂಡಗಳು ಮುಖಾಮುಖಿಯಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow