ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದ ಹೆಂಡತಿ..! ಪೊಲೀಸರನ್ನು ನಂಬಿಸಲು ಮಾಡಿದ ಪ್ಲಾನ್ ಫಲಿಸಲಿಲ್ಲ – ಮುಂದೇನಾಯ್ತು..?

ಮದುವೆ ಆದ ನಂತರ ಗಂಡ ಹಾಗೂ ಹೆಂಡತಿ ಇಬ್ಬರೂ ಕಷ್ಟ ಹಾಗೂ ಸುಖ ಎರಡಲ್ಲೂ ಪಾಲ್ಗೊಳ್ಳಬೇಕು. ಅಷ್ಟೇ ಅಲ್ಲ, ಮದುವೆಯಾದ ನಂತರ ಗಂಡ-ಹೆಂಡೆತಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳು ನಡೆಯುವುದು ಸಹಜ. ಆದರೆ ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೂ ಮಾತ್ರ ಇರಬೇಕು ಎಂದು ಗಾದೆ ಮಾತೆ ಇದೆ. ಎಂದಿಗೂ ಈ ಜಗಳವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಾರದು. ಆಗ ಮಾತ್ರ ಈ ಸಂಬಂಧವು ಜೀವನದುದ್ದಕ್ಕೂ ಶಾಶ್ವತವಾಗಿರುತ್ತದೆ.
ಆದ್ರೆ ಇಲ್ಲೊಬ್ಬ ಪಾಪಿ ಹೆಂಡತಿ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಂದ ಈ ಘಟನೆ ಕಾನ್ಪುರದಲ್ಲಿ ನಡೆದಿದೆ. ಅಬಿದ್ ಅಲಿ ಎಂಬ ವ್ಯಕ್ತಿ ತನ್ನ ಪತ್ನಿ ಶಬಾನಾ ಮತ್ತು ಮಗನೊಂದಿಗೆ ಕಾನ್ಪುರದಲ್ಲಿ ವಾಸಿಸುತ್ತಿದ್ದರು. ಜನವರಿ 19ರಂದು, ಶಬಾನಾ ಪೊಲೀಸ್ ಠಾಣೆಗೆ ಹೋಗಿ ತನ್ನ ಪತಿ ವಯಾಗ್ರದ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಳು.
ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಪರಿಶೀಲಿಸಿದಾಗ ಮೃತ ಅಬಿದ್‌ನ ಜೇಬಿನಲ್ಲಿ 8 ಪ್ಯಾಕೆಟ್ ವಯಾಗ್ರದ ಮಾತ್ರೆಗಳು ಕಂಡುಬಂದವು. ಅಲ್ಲದೆ, ಅಬಿದ್‌ನ ದೇಹದ ಮೇಲೆ ಹೊಡೆತ ಅಥವಾ ಇರಿತದ ಗಾಯಗಳಂತಹ ಯಾವುದೇ ಗುರುತುಗಳು ಕಂಡುಬಂದಿರಲಿಲ್ಲ. ಆದ್ದರಿಂದ, ಶಬಾನಾ ಅಂದರೆ ಅಬಿದ್‌ನ ಪತ್ನಿ ಸತ್ಯವನ್ನು ಹೇಳುತ್ತಿದ್ದಾಳೆ ಎಂದು ಪೊಲೀಸರು ಭಾವಿಸಿದ್ದರು.
ತನ್ನ ಗಂಡನ ಮರಣದ ನಂತರ ಶಬಾನಾ ತುಂಬಾ ಅಳುತ್ತಿರುವುದನ್ನು ಪೊಲೀಸರು ನೋಡಿದ್ದರು. ಆದ್ದರಿಂದ, ಪೊಲೀಸರು ಸಹ ಆಕೆ ಗಂಡನ ನಿಧನದಿಂದ ತುಂಬ ದುಃಖಿತಳಾಗಿದ್ದಾಳೆಂದು ಭಾವಿಸಿದ್ದರು. ಅದರ ನಂತರ ಪೊಲೀಸರು ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದರು. ಶವಪರೀಕ್ಷೆಯ ನಂತರ ಅಬಿದ್‌ನ ಶವವನ್ನು ಕುಟುಂಬಕ್ಕೆ ನೀಡಲಾಯಿತು. ಅವರ ಅಂತ್ಯಕ್ರಿಯೆಗಳನ್ನು ಸಹ ಮಾಡಲಾಯಿತು. ಆದರೆ, ಶವಪರೀಕ್ಷೆಯ ವರದಿಗಳು ಬಂದಾಗ, ಅಬಿದ್‌ನ ಸಾವಿಗೆ ಕಾರಣ ಕತ್ತು ಹಿಸುಕಿರುವುದು ಎಂದು ತಿಳಿದುಬಂದಿದೆ.
ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದಾಗ ಶಬಾನಾಳ ಸಹೋದರ ಸಲೀಂ ಪೊಲೀಸರಿಗೆ ಅಬಿದ್‌ನನ್ನು ಕೊಲೆ ಮಾಡಿರಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಈ ಕೊಲೆಯಲ್ಲಿ ಶಬಾನಾಗೆ ಯಾರಾದರೂ ಸಹಾಯ ಮಾಡಿರಬಹುದು ಎಂದು ಅಂದಾಜಿಸಲಾಗಿತ್ತು. ಅದರ ನಂತರ, ಪೊಲೀಸರು ಶಬಾನಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಪ್ರಾರಂಭಿಸಿದ್ದರು. ಅವರು ಆಕೆಯ ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸಿದರು.
ಆ ಸಮಯದಲ್ಲಿ, ಅವಳು ರೆಹಾನ್ ಎಂಬ ಯುವಕನೊಂದಿಗೆ ಮಾತನಾಡಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿತು. ಅಬಿದ್ ಸತ್ತಾಗಲೂ ಇಬ್ಬರೂ ಮಾತನಾಡಿದ್ದರು. ಇದಾದ ನಂತರ, ಪೊಲೀಸರು ರೆಹಾನ್ ಅವರನ್ನು ವಶಕ್ಕೆ ಪಡೆದರು. ಇಬ್ಬರನ್ನೂ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಇಬ್ಬರೂ ಸೇರಿ ಅಬಿದ್ ನನ್ನು ಕೊಂದಿದ್ದಾಗಿ ಒಪ್ಪಿಕೊಂಡರು. ಆ ನಂತರ, ಇಬ್ಬರನ್ನೂ ಬಂಧಿಸಲಾಯಿತು.
ನಿಮ್ಮ ಪ್ರತಿಕ್ರಿಯೆ ಏನು?






