RCB ಸೇರಿದ ಬೆನ್ನಲ್ಲೇ ಕನ್ನಡದ ಸ್ಟಾರ್ ನಟನ ಸಾಂಗ್ ಕೇಳಿ ಖುಷಿಪಟ್ಟ ಸಾಲ್ಟ್!

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಫಿಲ್ ಸಾಲ್ಟ್ ಅವರು ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ಆರಂಭಿಕನಾಗಿ ಕಣಕ್ಕಿಳಿಯುವ ಸಾಲ್ಟ್ ಉತ್ತಮ ಸ್ಟಾರ್ಟ್ ಕೊಡುತ್ತಿದ್ದಾರೆ. ಈ ಮೂಲಕ ಆರ್ ಸಿಬಿ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದ್ದಾರೆ.
RCB ಸೇರಿದ ಬೆನ್ನಲ್ಲೇ ಸಾಲ್ಟ್ ಅವರು ಕನ್ನಡದ ಸ್ಟಾರ್ ನಟನ ಹಾಡು ಕೇಳಿ ಖುಷಿ ಪಟ್ಟಿದ್ದಾರೆ. ಮಿಸ್ಟರ್ ನಾಗ್ ಸಂದರ್ಶನದಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಫಿಲ್ ಸಾಲ್ಟ್ ಉತ್ತರ ನೀಡಿದ್ದಾರೆ. ನೀವು ಬ್ಯಾಟಿಂಗ್ಗೆ ಹೋಗಬೇಕಾದರೆ ಒಂದು ಸಾಂಗ್ ಹಾಕುತ್ತಾರೆ. ಆ ಹಾಡು ಯಾವುದು ಅಂತ ಗೊತ್ತಾ ಅಂತ ಕೇಳಿದ್ದಾರೆ. ಇದಕ್ಕೆ ಫಿಲ್ ಸಾಲ್ಟ್ ಆ ಹಾಡು ನನಗೆ ಚೆನ್ನಾಗಿ ಗೊತ್ತಿದೆ ಎಂದು ಖುಷಿ ಪಟ್ಟಿದ್ದಾರೆ. ಇದೇ ವೇಳೆ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಸಾಂಗ್ ಅನ್ನು ಪ್ಲೇ ಮಾಡಿದ್ದು ಇದಕ್ಕೆ ಫಿಲ್ ಸಾಲ್ಟ್ ಧ್ವನಿಗೂಡಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯದ ಉಪೇಂದ್ರ ಸಿನಿಮಾದ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಹಾಡು ಈಗಲೂ ಕನ್ನಡಿಗರ ಮನದಲ್ಲಿ ಜನಪ್ರಿಯವಾಗಿದೆ. ಇಂತಹ ಹಾಡು ವಿದೇಶಿ ಆಟಗಾರರ ಮನ ಗೆದ್ದಿರುವುದು ಖುಷಿಯ ಸಂಗತಿಯೇ ಸರಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಆಟಗಾರರು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಹೋಗುವಾಗ ಉಪ್ಪಿಗಿಂತ ರುಚಿ ಬೇರೆ ಇಲ್ಲ ಹಾಡನ್ನು ಪ್ಲೇ ಮಾಡುತ್ತಿರುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






