3 ಕ್ಷೇತ್ರಗಳಲ್ಲಿ ಹಣ, ಹೆಂಡ, ಅಧಿಕಾರದ ದುರ್ಬಳಕೆ ಮಾಡಿ ಗೆದ್ದಿದ್ದಾರೆ: ಪಿ.ರಾಜೀವ್

ಬೆಂಗಳೂರು: 3 ಕ್ಷೇತ್ರಗಳಲ್ಲಿ ಹಣ, ಹೆಂಡ, ಅಧಿಕಾರದ ದುರ್ಬಳಕೆ ಮಾಡಿ ಗೆದ್ದಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,
3 ಕ್ಷೇತ್ರಗಳ ಗೆಲುವಿನ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿರುವ ಎಲ್ಲ ಪ್ರಕರಣಗಳ ರದ್ಧತಿಗೆ ಸ್ವತಃ ವಕೀಲರಾದ ಸಿದ್ದರಾಮಯ್ಯ ಅಫಿಡವಿಟ್ ಹಾಕಲಿ ಎಂದು ಪಿ.ರಾಜೀವ್ ಅವರು ಸವಾಲೆಸೆದರು. ಹಣ, ಹೆಂಡ, ಅಧಿಕಾರದ ದುರ್ಬಳಕೆ ಇವೆಲ್ಲ ಮಾಡಿ ಗೆದ್ದಿದ್ದಾರೆ. ಚುನಾವಣಾ ಗೆಲುವನ್ನು ನ್ಯಾಯಾಂಗ ವ್ಯವಸ್ಥೆಗೆ ನೆರಳಾಗಿ ಬಳಸುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ.
ಇನ್ನೂ ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದದ ಬಗ್ಗೆ ಬಿಜೆಪಿಯು ಸಮರ್ಥವಾಗಿ ಎದುರಿಸಿ, ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ನೀತಿಯ ಮೂಲಕ ಅಮಾಯಕ ರೈತರನ್ನು ಕೂಡ ಯಾವ ರೀತಿ ಬಲಿ ಕೊಡುತ್ತಿದೆ ಎಂಬ ಬಗ್ಗೆ ರಾಜ್ಯಾದ್ಯಂತ ಯಶಸ್ವಿ ಹೋರಾಟ ಕೈಗೊಂಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ರೈತರು, ಕಾಂಗ್ರೆಸ್ನ ಈ ನೀತಿಯನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






