ಮಾಜಿ ಪ್ರೇಯಸಿ ಔಟಾದ ಬೆನ್ನಲ್ಲೇ ಧರ್ಮಕೀರ್ತಿ ಔಟ್! ಸಿಕ್ಕ ಸಂಭಾವನೆ ಎಷ್ಟು!?

ಕಳೆದ ವಾರ ಮಾಜಿ ಪ್ರೇಯಸಿ ಅನುಷಾ ಔಟಾದ ಬೆನ್ನಲ್ಲೇ ಧರ್ಮಕೀರ್ತಿ ಈ ವಾರ ಔಟ್ ಆಗಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದು, ಕಿಚ್ಚನ ವೇದಿಕೆ ಏರುತ್ತಿದ್ದಂತೆ, ಧರ್ಮ ಕೀರ್ತಿರಾಜ್ ಅವರ 50 ಪ್ಲಸ್ ದಿನದ ವಿಡಿಯೋ ಜರ್ನಿಯನ್ನು ದೊಡ್ಡ ಪರದೆ ಮೇಲೆ ಪ್ಲೇ ಮಾಡಲಾಯಿತು. ಅದು ಮುಗಿದ ಬಳಿಕ, ನೈಸ್ ಒಳ್ಳೆಯ ಕ್ಷಣಗಳ ಗುಚ್ಛ ಎಂದು ಧರ್ಮ ಹೇಳಿದ್ದಾರೆ.
ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಧರ್ಮ, ಹನುಮಂತ ನಾಮಿನೇಟ್ ಆಗಿದ್ರು. ಕೊನೆಯ ಹಂತದಲ್ಲಿ ಚೈತ್ರಾ ಅವರು ಸೇಫ್ ಆಗಿದ್ದಾರೆ.
ನವಗ್ರಹ ಸಿನಿಮಾ ಮೂಲಕ ಖ್ಯಾತಿ ಪಡೆದ ಹಿರಿಯ ನಟ ಕೀರ್ತಿ ರಾಜ್ ಅವರ ಮಗ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಬೆಟ್ಟದಷ್ಟು ನಿರೀಕ್ಷೆಗಳು ಮೂಡಿದ್ದವು. ಆದರೆ ಧರ್ಮ ಅವರು ತಾಳ್ಮೆಯಿಂದ ಇದ್ದದ್ದೇ ಅವರಿಗೆ ಮುಳುವಾಗಿದೆ ಅಂತಿದ್ದಾರೆ ಪ್ರೇಕ್ಷಕರು.
ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಬಳಿಕ ಧರ್ಮ ಹೆಚ್ಚೇನು ಸದ್ದು ಮಾಡಲಿಲ್ಲ. ಟಾಸ್ಕ್ ಹಾಗೂ ಮನೆಯ ಜವಾಬ್ದಾರಿ ತೆಗೆದುಕೊಳ್ಳುವ ವಿಚಾರದಲ್ಲೂ ಮುಂದೆ ಬರಲಿದೆ. ಸೈಲೆಂಟ್ ಆಗಿಯೇ ಇರ್ತಿದ್ದ ಧರ್ಮಕೀರ್ತಿ ರಾಜ್, ಸ್ಪರ್ಧಿಗಳ ಜೊತೆ ಒಳ್ಳೆ ಸ್ನೇಹ ಹೊಂದಿದ್ರು. ಯಾರ ಜೊತೆಯೂ ಕಿತ್ತಾಡದೆ ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದಿದ್ದೆ ಧರ್ಮನಿಗೆ ಮುಳುವಾಯ್ತು ಅಂತ ಜನರು ಹೇಳ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






